More

    ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಲಿ

    ಭಾಲ್ಕಿ: ಕಲ್ಯಾಣ ಕನರ್ಾಟಕ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ಇದ್ದು, ಅದನ್ನು ಬಗೆಹರಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

    ಪಟ್ಟಣದ ಟೌನ್ಹಾಲ್ ಸಭಾಂಗಣದಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಕಲ್ಯಾಣ ಕನರ್ಾಟಕ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಅಸಮತೋಲನ ನಿವಾರಣೆ ಮತ್ತು ಅಭಿವೃದ್ಧಿಗಾಗಿ ಹಿಂದಿನ ಯುಪಿಎ ಸಕರ್ಾರ ಕಲಂ 371(ಜೆ) ಜಾರಿಗೊಳಿಸಿತು. ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ತಂದ ಪರಿಣಾಮ ಈ ಭಾಗದ ವಿದ್ಯಾಥರ್ಿಗಳು, ಯುವಕರು ಇಂಜಿನಿಯರ್, ಡಾಕ್ಟರ್ ಸೇರಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

    ಕಳೆದ ಮೂರು ವರ್ಷಗಳಿಂದ ಕಲ್ಯಾಣ ಕನರ್ಾಟಕ ಅಭಿವೃದ್ಧಿ ಬಗ್ಗೆ ನಿರ್ಲಕ್ಷೃ ತೋರಲಾಗುತ್ತಿದೆ. 371(ಜೆ) ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. 50 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಕ್ಷೇತ್ರದ ಹಾಲಹಳ್ಳಿ ಸ್ನಾತಕೋತ್ತರ ಕಾಲೇಜಿನಲ್ಲಿ 16 ಕೋಸರ್್ಗಳಿಗೆ ಕೇವಲ ಒಬ್ಬರೇ ಕಾಯಂ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದರು.

    ಸದರ್ಾರ್ ವಲ್ಲಭಬಾಯಿ ಪಟೇಲ್ರ ದಿಟ್ಟತನದ ನಿಧರ್ಾರದಿಂದ ನಮ್ಮ ಭಾಗಕ್ಕೆ ಸ್ವಾತಂತ್ರೃ ಸಿಕ್ಕಿದೆ. ಇದರ ಹಿಂದೆ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ ಸೇರಿ ಮುಂತಾದವರ ಕೊಡುಗೆ ದೊಡ್ಡದಿದೆ. ಅಂಥವರನ್ನು ಯಾವಾಗಲು ಸ್ಮರಿಸಬೇಕು ಎಂದು ತಿಳಿಸಿದರು.

    ನೌಬಾದ್ ಸಕರ್ಾರಿ ಪದವಿ ಕಾಲೇಜು ಪ್ರಾಧ್ಯಾಪಕ ಗಂಗಾಧರ ಕೋರಿ ಉಪನ್ಯಾಸ ಮಂಡಿಸಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಮೇಹಕರ್-ತಡೋಳಾ ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಪುರಸಭೆ ಅಧ್ಯಕ್ಷ ಅನೀಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ, ಸ್ವಾತಂತ್ರೃ ಸೇನಾನಿ ರಾಮರಾವ ವರವಟ್ಟಿಕರ್, ತಾಪಂ ಇಒ ದೀಪಿಕಾ ನಾಯ್ಕರ್ ಇತರರಿದ್ದರು. ತಹಸೀಲ್ದಾರ್ ಕೀತರ್ಿ ಚಾಲಕ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts