More

    ಪ್ರಸ್ತಾವ ನೀಡಿದರೆ ಅನುದಾನ ಬಿಡುಗಡೆ

    ಶಿರಸಿ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯವಾಗಿ ಬೇಕಿರುವ ಕಾಮಗಾರಿಗಳಿದ್ದರೆ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

    ಪ್ರಥಮ ಬಾರಿಗೆ ಶಿರಸಿಗೆ ಆಗಮಿಸಿದ್ದ ಅವರು ನಗರದ ವಿವಿಧ ಕಡೆ ಪ್ರಾಧಿಕಾರದ ಕಾಮಗಾರಿ ವೀಕ್ಷಿಸುವ ಜತೆ ಮರಾಠಿಕೊಪ್ಪ ಉದ್ಯಾನವನ ವೀಕ್ಷಿಸಿ ಮಾತನಾಡಿ, ಜಿಲ್ಲೆಯ ವಿವಿಧ ಕಡೆ ಅತ್ಯಗತ್ಯ ಕಾಮಗಾರಿಗಳ ಅವಶ್ಯಕತೆ ಇದೆ. ಸ್ಥಳೀಯರು, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಪ್ರಾಧಿಕಾರಕ್ಕೆ ಪ್ರಸ್ತಾವ ನೀಡಿದರೆ ಅನುದಾನ ಬಿಡುಗಡೆಗೆ ಅನುಕೂಲ ಆಗಲಿದೆ ಎಂದರು.

    ಪ್ರಾಧಿಕಾರದಿಂದ ಅಂದಾಜು 40 ಲಕ್ಷ ರೂ.ಗಳ ಅನುದಾನವನ್ನು ಈ ಉದ್ಯಾನಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ಇದು ಜನೋಪಯೋಗಕ್ಕೆ ಸಿಗುವಂತೆ ಉಸ್ತುವಾರಿ ನೋಡುತ್ತಿರುವ ನಗರಸಭೆ ಮಾಡಬೇಕು. ವ್ಯವಸ್ಥಿತ ಉಸ್ತುವಾರಿ ಜತೆ ನಗರಸಭೆಯವರು ಖಾಸಗಿಯವರಿಗೆ ನಿರ್ವಹಣೆ ಜವಾಬ್ದಾರಿ ನೀಡುವುದಾಗಿ ತಿಳಿಸಿದ್ದು, ಶೀಘ್ರವೇ ಕಾರ್ಯಾನುಷ್ಠಾನ ಆಗಬೇಕು ಎಂದು ಹೇಳಿದರು. ನಗರದ ಹೃದಯ ಭಾಗದಲ್ಲಿರುವ ದೇವಿಕೆರೆ ಹಾಗೂ ಜಲಮೂಲವಾದ ಹಾಲುಹೊಂಡ ಕೆರೆಗಳ ಸಮಗ್ರ ಅಭಿವೃದ್ಧಿಗೆ ತಲಾ 1 ಕೋಟಿ ರೂ. ಪ್ರಸ್ತಾವವನ್ನು ನಗರಾಡಳಿತದ ವತಿಯಿಂದ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಅದೇ ರೀತಿ ವಿಧಾನಸಭಾಧ್ಯಕ್ಷರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಿಕಾರದಿಂದ ಅನುದಾನ ಕೇಳಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮರಾಠಿಕೊಪ್ಪ ಉದ್ಯಾನವನಕ್ಕೆ ಲೈಟಿಂಗ್ ಹಾಗೂ ಬೇಂಚ್ ಸೌಲಭ್ಯ ಕೇಳಿದ್ದು, 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

    ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ ಡಿಸೋಜಾ, ಇಂಜಿನಿಯರ್ ಹರಿಹರ ಹರಿಕಂತ್ರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ರಮೇಶ ನಾಯಕ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts