More

    ಪ್ರವೇಶ ಶುಲ್ಕ ಹೆಚ್ಚಳ ಆದೇಶ ರದ್ದುಪಡಿಸಿ

    ಮೂಡಲಗಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರವೇಶ ಶುಲ್ಕ ಹೆಚ್ಚಳ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪಟ್ಟಣದ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಿ.ಜಿ. ಮಹಾತ ಮೂಲಕ ಉಪಕುಲಪತಿಗೆ ಗುರುವಾರ ಮನವಿ ಸಲ್ಲಿಸಿದರು.

    ನೇತೃತ್ವ ವಹಿಸಿದ್ದ ಎಬಿವಿಪಿ ಚಿಕ್ಕೋಡಿ ಜಿಲ್ಲಾ ಸಹ ಸಂಚಾಲಕ ಬಸು ಜೋಡಟ್ಟಿ ಮಾತನಾಡಿ, ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ ವ್ಯಾಸಂಗ ಮಾಡಲು ನೆರವಾಗಿದೆ. ಆದರೆ, ಪ್ರವೇಶ ಶುಲ್ಕ ಹೆಚ್ಚಳದಂತಹ ವಿದ್ಯಾರ್ಥಿ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಖಂಡನೀಯವಾಗಿದೆ ಎಂದರು. ಯುಜಿಸಿ ನಿಯಮದ ಪ್ರಕಾರ ಒಂದು ವರ್ಷಕ್ಕೆ ಅವಶ್ಯವಿದ್ದಲ್ಲಿ ಕೇವಲ ಶೇ.10ರಷ್ಟು ಮಾತ್ರ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಳ ಮಾಡಲು ಸೂಚನೆ ಇದೆ. ಆದರೆ, ಯುಜಿಸಿ ನಿಯಮ ಗಾಳಿಗೆ ತೂರಿ ಶೇ. 100 ಕ್ಕಿಂತಲೂ ಹೆಚ್ಚಿಗೆ ಮಾಡಿರುವುದು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೆ ಈ ಪ್ರವೇಶ ಶುಲ್ಕ ಹೆಚ್ಚಳ ಕ್ರಮ ಕೈಬಿಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಎಬಿವಿಪಿಯಿಂದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

    ಎಬಿವಿಪಿ ವಿದ್ಯಾರ್ಥಿಗಳ ಅಭಿವೃದ್ಧಿ ಸಮಿತಿಯ ಮಹಾದೇವ ನವನಿ, ನಗರ ಕಾರ್ಯದರ್ಶಿ ಗಿರೀಶ ಬಳಿಗಾರ, ಶಿವು ಸರಪನಿ, ಬಸವರಾಜ ಕೋಣಿ, ನಿಂಗಪ್ಪ ಲಿಂಗನೂರ, ಗುರು ಹಿರೇಮಠ, ಅರ್ಪಿತ ಮುಳವಾಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts