More

    ಪ್ರಯಾಣಿಕರಿಗೆ ಕರೊನಾ ವೈರಸ್ ಜಾಗೃತಿ

    ಹುಬ್ಬಳ್ಳಿ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ನೈಋತ್ಯ ರೈಲ್ವೆ ವಲಯ ಮುಂದಾಗಿದೆ.

    ಕರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಿರುವ ಮುಂಜಾಗ್ರತೆಯ ವಿವರಗಳುಳ್ಳ ಪೋಸ್ಟರ್​ಗಳನ್ನು ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಹಾಗೂ ಇತರೆಡೆ ಲಗತ್ತಿಸಲಾಗಿದೆ. ನಿಲ್ದಾಣದಲ್ಲಿರುವ ಟಿವಿಗಳಲ್ಲಿಯೂ ವೈರಸ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟರ್ ಹಾಗೂ ವಿಡಿಯೋ ತುಣುಕುಗಳನ್ನು ನೈಋತ್ಯ ರೈಲ್ವೆ ಹರಿಬಿಟ್ಟಿದೆ.

    ನೈಋತ್ಯ ರೈಲ್ವೆ, ವಿಭಾಗೀಯ ಮತ್ತು ರೈಲ್ವೆ ಆಸ್ಪತ್ರೆ ಸಿಬ್ಬಂದಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಕಳೆದ 3 ದಿನಗಳಿಂದ ನಿರತರಾಗಿದ್ದಾರೆ.

    ರೈಲ್ವೆ ನಿಲ್ದಾಣಗಳಲ್ಲಿನ ಪ್ರವೇಶದ್ವಾರ, ರೈಲುಗಳ ಬಾಗಿಲುಗಳು, ಶೌಚಗೃಹ, ಬೋಗಿಗಳು, ಸಂಪೂರ್ಣ ನಿಲ್ದಾಣಗಳನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಲಾಗುತ್ತಿದೆ. ಕೆಮ್ಮು, ಜ್ವರದ ಲಕ್ಷಣ ಇರುವ ಪ್ರಯಾಣಿಕರ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಸೆಂಟ್ರಲ್ ಆಸ್ಪತ್ರೆ, ಬೆಂಗಳೂರು ಹಾಗೂ ಮೈಸೂರಿನ ರೈಲ್ವೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿ ನಿರ್ವಿುಸಲಾಗಿದೆ.

    ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 706 ಬೆಡ್​ಗಳುಳ್ಳ 229 ಚಿಕಿತ್ಸಾ ಕೊಠಡಿಗಳನ್ನು ನಿರ್ವಿುಸಲಾಗಿದೆ. ಕರೊನಾ ವೈರಸ್ ಶಂಕಿತರಿಗೆ ನೀಡುವುದಕ್ಕಾಗಿ ಮಾಸ್ಕ್, ಗ್ಲೌಸ್, ಕ್ಯಾಪ್, ಹ್ಯಾಂಡ್​ವಾಶ್ ಇನ್ನಿತರ ಸಲಕರಣೆಗಳನ್ನು ಸಾಕಷ್ಟು ಸಂಗ್ರಹಿಸಲಾಗಿದೆ.

    ರೋಗ ಹರಡದಂತೆ ತಡೆಯಲು ಪ್ರಯಾಣಿಕರು ಹಾಗೂ ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಲಯದ ಮಹಾಪ್ರಭಂದಕ ಎ.ಕೆ. ಸಿಂಗ್ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts