More

    ಪ್ರಧಾನಿ ಮೋದಿ ಜನ್ಮದಿನ, ನಾಳೆಯಿಂದ ವಿವಿಧ ಕಾರ್ಯಕ್ರಮ

    ಖಾನಾಪುರ, ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೆ.17ರಿಂದ ಅ.2ರವರೆಗೆ ವಿವಿಧ ಸಾಮಾಜಿಕ ಮತ್ತು ಪರಿಸರ ಚಟುವಟಿಕೆ ನಡೆಸಲಾಗುವುದು. ಈ 15 ದಿನಗಳನ್ನು ಸೇವಾ ಪಾಕ್ಷಿಕವಾಗಿ ಜನಸೇವೆಗೆ ಮೀಸಲಿಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಮಾಹಿತಿ ನೀಡಿದರು.
    ತಾಲೂಕು ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

    ತಾಲೂಕಾಧ್ಯಕ್ಷ ಸಂಜಯ ಕುಬಲ್ ಮಾತನಾಡಿ, ಪ್ರಧಾನಿ ಮೋದಿ ಕಾರ್ಯಗಳು ದೇಶಪ್ರೇಮ ಮತ್ತು ರಾಷ್ಟ್ರ ನಿಷ್ಠೆಯ ಪ್ರತೀಕವಾಗಿದೆ. ವಿವಿಧ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ, ಅವರ ಸೇವೆಗಳು ಜನಸಾಮಾನ್ಯರಲ್ಲಿ ಜನಪ್ರಿಯವಾಗಿವೆ. ಆದ್ದರಿಂದ ಅವರ ಜನ್ಮದಿನದಂದು ಜನಸೇವಾ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಪರವಾದ ಉತ್ಸವದ ರೂಪ ನೀಡಲಾಗುವುದು. ಜತೆಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಉಚಿತ ಶಿಬಿರ, ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಸಸಿ ನೆಡುವುದು, ಕೆರೆಗಳ ಅಭಿವೃದ್ಧಿ, ರೈತರು, ಯುವಕರು, ಅಂಗವಿಕಲರು, ಮಹಿಳೆಯರ ಕೌಶಲಕ್ಕೆ ವ್ಯಾಪ್ತಿ ನೀಡುವ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು. ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಕಾರ್ಯಕರ್ತರು 15 ದಿನಗಳ ಸೇವೆಯನ್ನು ಸಮರ್ಪಣಾ ಮನೋಭಾವದಿಂದ ಯಶಸ್ವಿಗೊಳಿಸಬೇಕು ಎಂದರು.
    ಮಾಜಿ ಸದಸ್ಯ ಜ್ಯೋತಿಬಾ ರೇಮಾನಿ, ಬಾಬುರಾವ ದೇಸಾಯಿ, ಕಿರಣ ಯಳ್ಳೂರಕರ, ಬಸವರಾಜ ಸಾಣಿಕೊಪ್ಪ, ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ವಾಸಂತಿ ಬಡಗೇರ, ಅಪ್ಪಯ್ಯ ಕೊಡೋಳಿ, ದರ್ಶನ ಕಿಲಾರಿ, ಸಯಾಜಿ ಪಾಟೀಲ, ಮಲ್ಲಪ್ಪ ಮಾರಿಹಾಳ, ಮಾರುತಿ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts