More

    ಪ್ರಧಾನಿ ಕಾರ್ಯಕ್ರಮ ಹಿನ್ನೆಲೆ- ಸಂಚಾರ ಮಾರ್ಗದಲ್ಲಿ ಮಾರ್ಪಾಡು

    ದಾವಣಗೆರೆ: ಮಾ.25ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಕೆಲವೆಡೆ ವಾಹನಗಳ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
    ಸಮಾರಂಭ ನಡೆಯುವ ಸ್ಥಳದ ಸುತ್ತಮುತ್ತ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ದಾವಣಗೆರೆ ನಗರದ ಎಲ್ಲಾ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ಕಾರ್ಯಕ್ರಮದ ಸ್ಥಳದಿಂದ 2 ಕಿ.ಮೀ ವ್ಯಾಪ್ತಿಯ ಸುತ್ತಳತೆಯಲ್ಲಿ ಡ್ರೋಣ್ ಹಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
    ದ್ವಿತೀಯ ಪಿಯುಸಿ ಪರೀಕ್ಷೆಗೆ ಬರುವ ಮಕ್ಕಳು ತಮ್ಮೊಂದಿಗೆ ಪರೀಕ್ಷಾ ಪ್ರವೇಶಪತ್ರ ಮತ್ತು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜತೆಯಲ್ಲಿ ಇರಿಸಿಕೊಳ್ಳಬೇಕು. ಪರೀಕ್ಷಾರ್ಥಿಗಳಿಗೆ ಪೊಲೀಸರು ಅಡಚಣೆ ಮಾಡದೆ ಪರೀಕ್ಷೆಗೆ ಅನುಕೂಲ ಮಾಡಿಕೊಡಬೇಕು.
    ಸಾರ್ವಜನಿಕರು ಕ್ಯೂ.ಆರ್. ಕೋಡ್ ಸ್ಕ್ಯಾನ್ ಮೂಲಕ ನಿಲುಗಡೆ ಸ್ಥಳ ಆಯ್ದು ವಾಹನಗಳನ್ನು ಪಾರ್ಕಿಂಗ್ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
    ಪಾರ್ಕಿಂಗ್ ಸ್ಥಳಗಳು-ಮಾರ್ಗ
    1. ಎಪಿಎಂಸಿ-ಚಿಕ್ಕನಹಳ್ಳಿ: ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬಾಡಾ ಕ್ರಾಸ್‌ನಿಂದ ದಾವಣಗೆರೆ ಪ್ರವೇಶಿಸುವ ವಾಹನಗಳು.
    2. ಡಿಆರ್‌ಎಂ ಸೈನ್ಸ್ ಕಾಲೇಜು, ಹೈಸ್ಕೂಲ್ ಮೈದಾನ, ಯು.ಬಿ.ಡಿ.ಟಿ ಕಾಲೇಜು ಮೈದಾನ: ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಮಂಗಳೂರು ಕಡೆಯಿಂದ ಹದಡಿ ರಸ್ತೆ ಮೂಲಕ ಬರುವ ದಾವಣಗೆರೆ ಪ್ರವೇಶಿಸುವ ವಾಹನಗಳು.
    3. ಕುಂದುವಾಡ ಕೆರೆ ಸುತ್ತಮುತ್ತ: ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಬೈಪಾಸ್ ರಸ್ತೆ ಮುಖಾಂತರ ಹಳೆ ಕುಂದುವಾಡ ಕಡೆಯಿಂದ ಬರುವ ವಾಹನಗಳು.
    4. ಆವರಗೊಳ್ಳ ಕೇಂದ್ರೀಯ ವಿದ್ಯಾಲಯ: ಹರಪನಹಳ್ಳಿ-ಬಳ್ಳಾರಿ ವಿಜಯನಗರ ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್, ಕಲ್ಬುರ್ಗಿ, ಗದಗ, ಯಾದಗಿರಿ, ಹೊಸಪೇಟೆ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮೂಲಕ ಬರುವ ವಾಹನಗಳು.
    5. ಬಡಗಿ ಕೃಷ್ಣಪ್ಪ ಲೇಔಟ್: ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ ಜಿಲ್ಲೆಗಳಿಂದ ಜಗಳೂರು ರಸ್ತೆ ಮೂಲಕ ಬರುವ ವಾಹನಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts