More

    ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸಿದ್ಧತೆ

    ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸಿದ್ಧತೆ ನಡೆದಿದೆ. ಧಾರವಾಡ ಹಾಲು ಒಕ್ಕೂಟದ ಅನುಮತಿಯೂ ದೊರೆತಿದೆ. ಎನ್​ಡಿಡಿಬಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ವೆ ನಡೆಸಬೇಕಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹೇಳಿದರು.

    ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ- ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಶೇಖರಣೆ ಆಗುತ್ತಿದೆ. ಶಿರಸಿಯಲ್ಲಿ ಪ್ಯಾಕಿಂಗ್ ಘಟಕ ಸಿದ್ಧಗೊಳ್ಳುತ್ತಿದೆ. ಜಿಲ್ಲೆಯಲ್ಲಿ 11 ಬಿಎಂಸಿ ಕೇಂದ್ರಗಳಿದ್ದು, ಒಕ್ಕೂಟ ರಚನೆಗೆ ಸಹಕಾರಿ ಆಗಲಿದೆ. ಹಾಲು ಸಂಘದ ಎಲ್ಲ ಸದಸ್ಯರನ್ನು ಕಲ್ಯಾಣ ಸಂಘದ ಸದಸ್ಯರನ್ನಾಗಿ ಮಾಡಲು ಕಾರ್ಯದರ್ಶಿಗಳು ಮುಂದಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಿದ್ದಾಪುರ ತಾಲೂಕಿನ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಮಾತನಾಡಿ, ತಾಲೂಕಿನ 54 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸೂರಿನಲ್ಲಿರುವ ಒಕ್ಕೂಟದ ಕ್ಷೀರ ಕೇಂದ್ರ ಅಭಿವೃದ್ಧಿಗೆ ಧಾರವಾಡ ಹಾಲು ಒಕ್ಕೂಟ ಐಬಿಪಿ (ಇಂಟಿಗ್ರೇಟೆಡ್ ಬ್ಯುಸಿನೆಸ್ ಪ್ಲಾ್ಯನ್) ಸಮಗ್ರ ವಹಿವಾಟು ಯೋಜನೆಯಡಿ 30 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದರು. ಹೂವಿನಮನೆ ಹಾಲು ಸಂಘದ ಅಧ್ಯಕ್ಷ ಕೃಷ್ಣ ಹೆಗಡೆ, ಪಶು ವೈದ್ಯಾಧಿಕಾರಿ ಡಾ. ರಾಕೇಶ ಇದ್ದರು. ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts