More

    ಪ್ರತಿಯೊಬ್ಬರೂ ಸೈನಿಕರನ್ನು ಸ್ಮರಿಸಿ

    ನರಗುಂದ: ಭಾರತಾಂಭೆಯ ರಕ್ಷಣೆಗೆ ಮೈಕೊರೆಯುವ ಚಳಿಯಲ್ಲಿ ರಕ್ತ ಹೆಪ್ಪು ಗಟ್ಟಿಸುವ ಹಿಮದ ರಾಶಿಯ ನಡುವೆ ವೀರಾವೇಶದಿಂದ ಹೋರಾಡಿ, ಮಾತೃಭೂಮಿಗಾಗಿ ಕಾರ್ಗಿಲ್ ಯುದ್ಧದಲ್ಲಿ ಮಣ್ಣಲ್ಲಿ ಮಣ್ಣಾದ ಸೈನಿಕರ ತ್ಯಾಗ, ಧೈರ್ಯ, ಸಾಹಸ, ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

    ತಾಲೂಕಿನ ಭೈರನಹಟ್ಟಿಯಲ್ಲಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀದೊರೆಸ್ವಾಮಿ ಜನಕಲ್ಯಾಣ ಶಿಕ್ಷಣ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 21ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು.

    ‘ಐತಿಹಾಸಿಕ ಜಯಕ್ಕೆ ಕಾರಣರಾದ ಭಾರತೀಯ ಸೈನ್ಯಕ್ಕೆ ನಾವೆಲ್ಲರೂ ಚಿರಋಣಿಯಾಗಿರಬೇಕು. ದೇಶದೊಳಗಿರುವ ಪ್ರತಿಯೊಬ್ಬ ಜನಸಾಮಾನ್ಯರು ಸುರಕ್ಷತೆಯಿಂದ ಜೀವನ ಸಾಗಿಸಲು ಅದಕ್ಕೆ ಬಹುಮುಖ್ಯ ಕಾರಣ ಗಡಿಯಲ್ಲಿರುವ ನಮ್ಮ ಸೈನಿಕರು. ಆದ್ದರಿಂದ ಸೈನಿಕರನ್ನು ಗೌರವದಿಂದ ಕಾಣಬೇಕು. ಸೈನಿಕರ ತ್ಯಾಗ ಬಲಿದಾನಗಳನ್ನು ನೆನಪಿಸುವುದರ ಜೊತೆಗೆ ಅವರಿಗೆ ಅಭಿನಂದನೆ ಸಲ್ಲಿಸಬೇಕು’ ಎಂದರು.

    ನರಗುಂದ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಮೊರಬ ಮಾತನಾಡಿ, ಕಾರ್ಗಿಲ್ ವಿಜಯ ಹಲವಾರು ಸೈನಿಕರ ತ್ಯಾಗ ಬಲಿದಾನಗಳ ಸಂಕೇತವಾಗಿದೆ. ಅಂದು ನಡೆದ ಯುದ್ದದಲ್ಲಿ ಸೈನಿಕರು ದೇಶ ಸೇವೆಯೇ ಈಶಸೇವೆ ಎಂದು ಸಾವಿಗೆ ಎದೆಗುಂದದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದನ್ನು ನೆನಪಿಸಿಕೊಂಡರು. ವರ್ತಕ ಕೆ.ಡಿ. ಬಿಜಾಪೂರ, ಹನುಮಂತಗೌಡ ಪಾಟೀಲ, ಈರಯ್ಯ ಕುಲಕರ್ಣಿ, ಬಸಪ್ಪ ಸಂಗಳದ, ಲಿಂಗರಾಜ ಮೊರಬದ, ಭೀಮಪ್ಪ ಮನೇನಕೊಪ್ಪ ಉಪಸ್ಥಿತರಿದ್ದರು. ಪೊ›. ರಮೇಶ ಐನಾಪೂರ, ಮಹಾಂತೇಶ ಹಿರೇಮಠ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts