More

    ಪ್ರತಿಯೊಬ್ಬರೂ ಕನ್ನಡ ಭಾಷೆ ಪ್ರೀತಿಸಿ

    ಬೆಳಗಾವಿ: ರಾಜ್ಯದ ಮೂಲೆ ಮೂಲೆಯಲ್ಲಿ ಒಂದು ಕೋಟಿಗೂ ಹೆಚ್ಚು ಜನ ಏಕಕಂಠದಲ್ಲಿ ಆಯ್ದ ಆರು ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಲಾಗಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆ ಪ್ರೀತಿಸುವ ಜತೆಗೆ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆ ಮನೆಗಳಲ್ಲಿ ಕನ್ನಡ ಹಾಡುಗಳ ಗಾಯನದ ಮೂಲಕ ಕನ್ನಡ ಇತಿಹಾಸ ಸೃಷ್ಟಿಸಲು ನಾವೆಲ್ಲರೂ ಕೈಜೊಡಿಸೋಣ ಎಂದರು.

    ಸರ್ಕಾರದ ನಿರ್ದೇಶನದಂತೆ ನಾಡಿನೆಲ್ಲೆಡೆ 10 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ರಾಜ್ಯದ ಮೂಲೆ ಮೂಲೆಯಲ್ಲಿ, ಗ್ರಾಮ ಗ್ರಾಮಗಳಲ್ಲಿ ಒಂದು ಕೋಟಿಗೂ ಹೆಚ್ಚು ಕಂಠಗಳಲ್ಲಿ ಕನ್ನಡ ಗಾಯನ ಮೊಳಗಲಿದೆ, ಕೋಟಿ ಕಂಠದಲ್ಲಿ ನಮ್ಮ ಕಂಠಗಳನ್ನು ಜೋಡಿಸುವ ಮೂಲಕ ಕೋಟಿ ಕಂಠ ಗಾಯನ ಯಶಸ್ವಿಗೊಳಿಸಲಾಗಿದೆ.ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು.ಅಲ್ಲದೆ, ಕನ್ನಡಿಗರು ಸ್ವಯಂ ಪ್ರೇರಣೆಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

    ಒಟ್ಟು ಆರು ಕನ್ನಡ ಹಾಡುಗಳನ್ನು ಹಾಡಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.ಕೋಟಿಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದಲ್ಲಿ ನಗರದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಏಕಕಂಠದಲ್ಲಿ ಹಾಡಿದರು. ಇದಲ್ಲದೇ ಮಕ್ಕಳಿಗೆ ಸಂಕಲ್ಪ ವಿಧಿ ಬೋಧಿಸಲಾಯಿತು.

    ಶಾಸಕ ಅನಿಲ ಬೆನಕೆ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಪಾಲಿಕೆಯ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಪ್ರಶಾಂತ ಹುನಗುಂದ, ಡಾ.ಸಂಜಯ ಡುಮ್ಮಗೋಳ, ಟಿಪಿಒ ಅಧಿಕಾರಿ ಬಿ.ವಿ.ಹಿರೇಮಠ, ತಹಸೀಲ್ದಾರ್ ಆರ್.ಬಿ.ಕುಲಕರ್ಣಿ, ಪಾಲಿಕೆ ಅಭಿವೃದ್ಧಿ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ, ಸರ್ವಮಂಗಳ ಅರಳಿಮಟ್ಟಿ, ನಯನಾ ಗಿರಿಗೌಡರ, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts