More

    ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಟ್ಟ ರಾಜರ್ಷಿ

    ಮೈಸೂರು: ರಾಜಪ್ರಭುತ್ವವನ್ನು ತ್ಯಾಗ ಮಾಡುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಟ್ಟರು ಎಂದು ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಹೇಳಿದರು.

    ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ನಾಲ್ವಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸರ್ವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ನಾಲ್ವಡಿ ಅವರು ಸಾಮಾಜಿಕ ಕಾರ್ಯ ರೂಪಿಸಿದ್ದರು. ಹಿಂದುಳಿದ ವರ್ಗ, ಶೋಷಿತ ವರ್ಗಗಳಿಗೆ ಮೊದಲು ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟು ಮಾದರಿಯಾಗಿದ್ದರು. ಆದ್ದರಿಂದ ಜನಪರ ಸೇವೆ ಪಡೆದ ಕನ್ನಡಿಗರಾದ ನಾವೆಲ್ಲ ನಾಲ್ವಡಿ ಅವರನ್ನು ಸ್ಮರಿಸಬೇಕು ಎಂದರು.

    ಕನ್ನಡ ಜನರಲ್ಲಿ ಜೀವಂತವಾಗಿರಬೇಕು ಎಂಬ ಆಶಯದಿಂದ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದರು. ಆದರೆ, ಈಗ ಕನ್ನಡಿಗರು ಬೇರೆ ಭಾಷೆಯನ್ನು ಬಳಕೆ ಮಾಡುತ್ತಿರುವುದು ದುರಂತ ಎನಿಸಿದೆ ಎಂದರು.

    ಸಹಾಯಕ ಪೊಲೀಸ್ ಆಯುಕ್ತ ಪರಶುರಾಮಪ್ಪ ಮಾತನಾಡಿ, ನಾಲ್ವಡಿ ಅವರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಬಡವರು, ಶೋಷಿತರು, ಮಹಿಳೆಯರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿಕೊಟ್ಟರು ಎಂದರು.

    ಪಶುಸಂಗೋಪನೆ ಅಧಿಕಾರಿ ಡಾ.ಸಿ.ಪಿ.ತಿಮ್ಮಯ್ಯ, ಪತ್ರಕರ್ತ ಎಚ್.ಎಸ್.ದಿನೇಶ್‌ಕುಮಾರ್, ವೈದ್ಯೆ ಡಾ.ರೇಖಾ ಮನಶಾಂತಿ, ಸಮಾಜ ಸೇವಕರಾದ ಗೀತಾ ವೇಲುಮಣಿ, ಡಾ.ಮಂಜುಳ ಉಮೇಶ್, ಶಶಿಕಲಾ ಸುರೇಂದರ್, ಪೃಥ್ವಿಸಿಂಗ್ ಚಾಂದಾವತ್, ಶಿಕ್ಷಣ ಕ್ಷೇತ್ರದ ವಿಶ್ವನಾಥ್ ಶೇಷಾಚಲ, ಕ್ರೀಡಾ ತರಬೇತುದಾರ ಡಾ.ಶ್ರೀಷಾ ಭಟ್, ಸೌಂದರ್ಯ ತಜ್ಞೆ ಶಿಲ್ಪಾ ಸುಧಾಕರ್, ಹೋರಾಟಗಾರ ಅನಿಷ್ ಶಿವಪ್ಪ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts