More

    ಪ್ರಕೃತಿಯನ್ನು ಆರಾಧಿಸಿ ಆನಂದವಾಗಿರಿ

    ಬೀದರ್: ಹಿಂದು ಆಧ್ಯಾತ್ಮಿಕ ಸೇವಾ ಮೇಳ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಭಾನುವಾರ ದೇಶವ್ಯಾಪಿ ಹಮ್ಮಿಕೊಂಡಿದ್ದ ಪ್ರಕೃತಿ ವಂದನಾ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಭರಪೂರ ಸಾಥ್ ಸಿಕ್ಕಿತು. ವಿವಿಧ ಸಂಘ ಸಂಸ್ಥೆಗಳು ವಿವಿಧೆಡೆ ಕಾರ್ಯಕ್ರಮ ಆಯೋಜಿಸಿ ಪ್ರಕೃತಿ ವಿಶೇಷತೆ, ಸಂರಕ್ಷಣೆ ಬಗ್ಗೆ ಚಿಂತನ-ಮಂಥನ ನಡೆಸಿದವು.
    ನಗರದ ಸರಸ್ವತಿ ವಿದ್ಯಾಮಂದಿರ ಪರಿಸರದಲ್ಲಿರುವ ಆರೆಸ್ಸೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಸಸಿಗಳಿಗೆ ನೀರು ಹಾಕಿ ಪೂಜಿಸುವ ಮುಖಾಂತರ ಪ್ರಕೃತಿ ವಂದನಾ ನಡೆಯಿತು. ಆರೆಸ್ಸೆಸ್ ಕರ್ನಾಟಕ ಉತ್ತರ ಪ್ರಾಂತ ಶಾರೀರಿಕ ಪ್ರಮುಖ ನಾಗೇಶ ರೆಡ್ಡಿ ಮಾತನಾಡಿ, ಪ್ರಕೃತಿ ಸಮಾಜವನ್ನು ಸಂರಕ್ಷಿಸುವ ದೇವರು. ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸುಖ, ನೆಮ್ಮದಿ, ಆರೋಗ್ಯವಂತವಾಗಿ ಇರಲು ಪ್ರತಿಯೊಬ್ಬರೂ ಪ್ರಕೃತಿಯ ಆರಾಧಕರಾಗಬೇಕು. ಅಂದಾಗಲೇ ಆನಂದ ಕಾಣಲು ಸಾಧ್ಯ ಎಂದು ಪ್ರತಿಪಾದಿಸಿದರು.
    ಪ್ರಕೃತಿ ವಂದನಾ ಇಂದು ಎಲ್ಲೆಡೆ ನಡೆಯುತ್ತಿರುವುದು ಮಹತ್ಕಾರ್ಯ ಎನಿಸಿದೆ. ಪ್ರಕೃತಿ ಸಂರಕ್ಷಣೆಯೇ ನಮ್ಮ ಮೊದಲ ಆದ್ಯತೆ ಆಗಬೇಕು. ಪ್ರಕೃತಿ ಮಡಿಲಲ್ಲಿ ಸಿಗುವಂತಹ ನೈಸಗರ್ಿಕ ಸಂಪನ್ಮೂಲಗಳಾದ ನೆಲ, ಜಲ, ಗಾಳಿ, ಬೆಳಕು, ಸಸ್ಯ ಹಾಗೂ ಸಕಲ ಜೀವರಾಶಿಗಳ ಪೋಷಣೆ ನಡೆಯಬೇಕು. ಪ್ರಕೃತಿ ಉಳಿದಾಗಲೇ ನಾವೆಲ್ಲರೂ ಉಳಿಯುತ್ತೇವೆ. ಪ್ರಕೃತಿ ನಾಶವಾದರೆ ಸಮಾಜಕ್ಕೆ ಆಪತ್ತು ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
    ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಹಣಮಂತರಾವ ಪಾಟೀಲ್ ವೃಕ್ಷಗಳಿಗೆ ಪೂಜೆ ಸಲ್ಲ್ಲಿಸಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿದರು. ಪ್ರಮುಖರಾದ ಎನ್. ಕೃಷ್ಣಾರೆಡ್ಡಿ, ಗುರುನಾಥ ಕೊಳ್ಳುರ್, ಶಿವಶರಣಪ್ಪ ಪಾಟೀಲ್, ಗುರುನಾಥ ರಾಜಗಿರಾ, ಸತೀಶ ಪಾಂಚಾಳ, ಪೀರಪ್ಪ ಔರಾದೆ, ರಾಜಕುಮಾರ ನೆಮತಾಬಾದೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts