More

    ಪೌರ ಕಾರ್ವಿುಕರೇ ಪುರಸಭೆ ಬೆನ್ನೆಲುಬು

    ಗಜೇಂದ್ರಗಡ: ಊರಿನ ಕೊಳೆ ತೆಗೆಯುವ ಪೌರ ಕಾರ್ವಿುಕರೇ ಪುರಸಭೆಯ ಬೆನ್ನೆಲುಬು ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ಪುರಸಭೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರಕಾರ್ವಿುಕರು ಪಟ್ಟಣದ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿ ಮತ್ತಿತರ ಕಾರ್ಯ ನಿರ್ವಹಿಸುತ್ತಾರೆ. ಅವರ ಬವಣೆಗಳನ್ನು ದೂರವಾಗಿಸಲು, ಸರ್ಕಾರದ ಯೋಜನೆಗಳು ಫಲಕಾರಿಯಾಗಲು ಕಾಳಜಿ ವಹಿಸಲಾಗುವುದು ಎಂದರು.

    ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ ಮಾತನಾಡಿದರು. ಎಸ್.ಎಂ. ಭೂಮರಡ್ಡಿ ಕಾಲೇಜ್ ಆವರಣದಲ್ಲಿ ಬೆಳಗ್ಗೆ ಪುರಸಭೆಯಿಂದ ಪೌರಕಾರ್ವಿುಕರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಮಹಿಳೆಯರ 100 ಮೀ. ಓಟ-ಶೋಭವ್ವ ಮಾದರ ಪ್ರಥಮ, ಲಿಂಬವ್ವ ಮಾದರ ದ್ವಿತೀಯ, ಮುದಕವ್ವ ಚಲವಾದಿ ತೃತೀಯ. ಪುರುಷರ ಭರ್ಚಿ ಎಸೆತ-ಎಚ್.ಎನ್. ನಿಶಾನದಾರ ಪ್ರಥಮ, ನಿಂಗಪ್ಪ ಮಾದರ ದ್ವಿತೀಯ, ಎಂ.ಎಂ. ತೋಟದ ತೃತೀಯ. ಪುರುಷರ ಚಕ್ರ ಎಸೆತ-ಎಚ್.ಎನ್. ನಿಶಾನದಾರ ಪ್ರಥಮ, ರಾಜೇಸಾಬ್ ನಿಶಾನದಾರ ದ್ವಿತೀಯ, ಮಾರುತಿ ಅಬ್ಬಿಗೇರಿ ತೃತೀಯ. ಪುರುಷರ ಗುಂಡು ಎಸೆತ-ಎಂ.ಎಂ. ತೋಟದ ಪ್ರಥಮ, ನಿಂಗಪ್ಪ ಮಾದರ ದ್ವಿತೀಯ, ಎಚ್.ಎನ್. ನಿಶಾನದಾರ ತೃತೀಯ ಸ್ಥಾನ ಪಡೆದರು.

    ವಿಜೇತರಿಗೆ ಪುರಸಭೆಯಿಂದ ಬಹುಮಾನ ನೀಡಲಾಯಿತು. ಎಲ್ಲ 39 ಪೌರ ಕಾರ್ವಿುಕರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕರ, ಕನಕಪ್ಪ ಅರಳಿಗಿಡದ, ಮುದಿಯಪ್ಪ ಮುಧೋಳ, ಯು.ಎಸ್. ಉಪ್ಪಿನಬೆಟಗೇರಿ, ರವೀಂದ್ರ ಶಿಂಗ್ರಿ, ರಾಘವೇಂದ್ರ ಮಂತಾ, ಪಿ.ಎನ್. ದೊಡ್ಡಮನಿ, ಲಕ್ಷ್ಮ ಮಾಳೋತ್ತರ, ಶಿವಪ್ಪ ಮಾದರ, ಹನುಮಂತ ಚಲವಾದಿ, ನಜೀರಸಾಬ್ ಸಾಂಗ್ಲಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts