More

    ಪೌರಾಣಿಕ ನಾಟಕಗಳ ಪ್ರದರ್ಶನ ನಿರಂತರವಾಗಿರಲಿ:ಶಾಸಕ ಸಿಮೆಂಟ್ ಮಂಜು

    ಹಾಸನ: ಗ್ರಾಮಾಂತರ ಪ್ರದೇಶದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪೌರಾಣಿಕ ನಾಟಕ ಜನರನ್ನು ಆಕರ್ಷಿಸುವ ಹಾಗೂ ಪುರಾಣ ಕಾಲದ ರಾಜ ಮಹಾರಾಜರ ಕಾಲದ ಗತವೈಭವ ತಿಳಿದಂತಾಗುವುದು. ಇಂತಹ ನಾಟಕ ಪ್ರದರ್ಶನಗಳು ನಿರಂತರವಾಗಿ ನಡೆಸಿಕೊಂಡು ಬರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
    ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ರಾಮಾಯಣ ನಾಟಕದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಮಾಯಣ, ಮಹಾಭಾರತ ಮುಂತಾದ ಹಲವಾರು ಪೌರಾಣಿಕ ನಾಟಕಗಳು ಪುರಾಣ ಕತೆಗಳನ್ನು ತಿಳಿಸಿದರೆ, ಐತಿಹಾಸಿಕ ಚರಿತ್ರೆ ನಾಟಕಗಳು ಇತಿಹಾಸ ಪರಂಪರೆಯ ವಿಚಾರಗಳನ್ನು ನಮಗೆ ತಿಳಿಸುತ್ತವೆ ಎಂದರು.
    ಆಲೂರು- ಸಕಲೇಶಪುರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನಿಡಲಾಗುವುದು. ಕಟ್ಟಾಯ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ಮೇಲೆ ಅನುದಾನ ನಿಡಲಾಗುವುದು ಹಾಗೂ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ, ಕುಡಿಯುವ ನೀರು ಮತ್ತು ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
    ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೊಸಳೆಹೊಸಹಳ್ಳಿ ದ್ಯಾವೇಗೌಡ, ಪೌರಾಣಿಕ ನಾಟಕ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರನ್ನು ನಾವು ಗೌರವಿಸಬೇಕು. ಹಳ್ಳಿಗಳಲ್ಲಿ ನಾಟಕ ಪ್ರದರ್ಶನದಿಂದ ನಮ್ಮಲ್ಲಿ ಒಗ್ಗಟ್ಟು ಇನ್ನೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಂಗಸ್ವಾಮಿ, ಕಟ್ಟಾಯ ಶಿವಕುಮಾರ್, ಡಿ.ಮಲ್ಲೇಶ್, ಪುಟ್ಟೇಗೌಡ, ಕೃಷ್ಣೇಗೌಡ, ಸ್ವಾಮಿಗೌಡ, ಸುರೇಶ್, ಕೃಷ್ಣಗೌಡ, ವರದೇಗೌಡ, ಕೆ.ಎಸ್. ಜಗದೀಶ್, ಪ್ರಕಾಶ್, ಕೆ.ಎಂ. ಗಿರೀಶ್, ಅಣ್ಣೇಗೌಡ ಹಾಗೂ ಕಟ್ಟಾಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts