More

    ಪೊಲೀಸ್ ವಸತಿಗೃಹಗಳ ತೆರವಿಗೆ ಗಡುವು

    ಧಾರವಾಡ: ತಾಲೂಕಿನ ಮುಗದ ಗ್ರಾಮದಲ್ಲಿರುವ ಪೊಲೀಸ್ ವಸತಿಗೃಹಗಳನ್ನು ಸಾರ್ವಜನಿಕರು ಅತಿಕ್ರಮಣ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹಾಗೂ ಅಧಿಕಾರಿ, ಸಿಬ್ಬಂದಿ ಶುಕ್ರವಾರ ಗ್ರಾಮಕ್ಕೆ ತೆರಳಿ ತೆರವುಗೊಳಿಸಲು ಗಡುವು ನೀಡಿದರು.

    ಮುಗದ ಗ್ರಾಮದಲ್ಲಿ 1970ರಿಂದ ಪೊಲೀಸ್ ಠಾಣೆ ಇತ್ತು. ಅಂದಾಜು 1 ಎಕರೆ ಜಾಗದಲ್ಲಿ ಠಾಣೆ, ಪಿಎಸ್​ಐ ವಸತಿಗೃಹ, ಸಿಬ್ಬಂದಿಗಾಗಿ 12 ವಸತಿಗೃಹಗಳನ್ನು ನಿರ್ವಿುಸಲಾಗಿತ್ತು. ಪೊಲೀಸ್ ಠಾಣೆ ಅಳ್ನಾವರಕ್ಕೆ ಸ್ಥಳಾಂತರವಾದ ನಂತರ ವಸತಿಗೃಹಗಳು ಈಗಲೂ ಇದ್ದು, 15 ವರ್ಷಗಳಿಂದ ಕೆಲ ಗ್ರಾಮಸ್ಥರು ಅತಿಕ್ರಮಣ ಮಾಡಿಕೊಂಡು ವಾಸವಿದ್ದಾರೆ. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಸ್​ಪಿ ವರ್ತಿಕಾ, ಡಿವೈಎಸ್​ಪಿ ರವಿ ನಾಯ್ಕ ಹಾಗೂ ಗ್ರಾಮೀಣ ಠಾಣೆ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದರು.

    ಪೊಲೀಸ್ ಇಲಾಖೆ ಅಧೀನದ ಜಾಗದಲ್ಲಿ ಗ್ರಾ.ಪಂ. ಕಟ್ಟಡ, ಅಂಗನವಾಡಿ ಕಟ್ಟಡ, ಜಲ ಸಂಗ್ರಹಾಗಾರ ಹಾಗೂ ದೇವಸ್ಥಾನವೊಂದನ್ನು ನಿರ್ವಿುಸಿರುವುದು ಮೇಲ್ನೋಟಕ್ಕೆ ಕಂಡುಬಂತು. ಈ ಬಗ್ಗೆ ಸರ್ವೆ ನಡೆಸಿ, ಗಡಿ ಗುರುತು ಮಾಡಲಾಗುವುದು. ಅತಿಕ್ರಮಣವಾಗಿದ್ದರೆ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ವರ್ತಿಕಾ ತಿಳಿಸಿದರು. ಮನೆಗಳಿಲ್ಲದವರು ವಸತಿಗೃಹಗಳಲ್ಲಿ ನೆಲೆಸಿದ್ದು, ತೆರವುಗೊಳಿಸಲಾಗುವುದು ಎಂದು ಗ್ರಾಮಸ್ಥರು ಹೇಳಿದರು.

    ಜನತಾ ಬಜಾರ್​ನ ಕಟ್ಟೆಗಳ ವ್ಯಾಪಾರಸ್ಥರಿಗಾಗಿ ಭಾರತ ಮಿಲ್ ಮೈದಾನದಲ್ಲಿ ತಾತ್ಕಾಲಿಕ ಶೆಡ್ ನಿರ್ವಿುಸಲಾಗುವುದು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

    -ಎಸ್.ಎಚ್. ನರೇಗಲ್, ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts