More

    ಪೊಲೀಸ್ ಅಧಿಕಾರಿ ಸೇರಿ ಇಬ್ಬರ ವಿಚಾರಣೆ

    ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಶುಕ್ರವಾರ ಮತ್ತೆ ಕೆಲವರನ್ನು ವಿಚಾರಣೆಗೊಳಪಡಿಸಿದರು. ಇತ್ತೀಚೆಗೆ ಮಧ್ಯಂತರ ಆರೋಪಪಟ್ಟಿ ಸಲ್ಲಿಸಿದ್ದ ಸಿಬಿಐ ಅಧಿಕಾರಿಗಳ ತಂಡ, ಕೆಲ ದಿನ ತನಿಖೆಗೆ ಬಿಡುವು ನೀಡಿದ್ದರಿಂದ ನಗರದಲ್ಲಿ ಕಾಣಿಸಿಕೊಂಡಿರಲಿಲ್ಲ.

    ಈ ಹಿಂದೆ ಪ್ರಕರಣದ ಪೊಲೀಸ್ ತನಿಖೆ ನಡೆದಿದ್ದಾಗ, ಬೆಳಗಾವಿ ಎಸ್​ಪಿ ಕಾರ್ಯಾಲಯದಲ್ಲಿ ಡಿವೈಎಸ್​ಪಿ ಆಗಿದ್ದ ತುಳಜಪ್ಪ ಸುಲ್ಪಿ, ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ರಾಜಿ ಸಂಧಾನಕ್ಕೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಯೋಗೀಶಗೌಡ ಸಹೋದರ ಗುರುನಾಥಗೌಡರ ಗೋವನಕೊಪ್ಪ ಗ್ರಾಮದ ಮನೆಗೆ ಸುಲ್ಪಿ ಭೇಟಿ ನೀಡಿ ಮಾತನಾಡಿದ್ದ ಸಂದರ್ಭ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

    ಡಿವೈಎಸ್​ಪಿ ಸುಲ್ಪಿಗೆ ಸಿಬಿಐ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದರು. ಅದರಂತೆ ಶನಿವಾರ ಇಲ್ಲಿನ ಉಪನಗರ ಠಾಣೆಗೆ ಬಂದ ಸುಲ್ಪಿ, ವಿಚಾರಣೆಗೆ ಹಾಜರಾದರು. ಇದೇ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಎನ್ನಲಾಗಿರುವ ಕಾಂಗ್ರೆಸ್ ಮುಖಂಡ ಮನೋಜ ಕರ್ಜಗಿ ಅವರನ್ನೂ ಸಿಬಿಐ ಅಧಿಕಾರಿಗಳು ಉಪನಗರ ಠಾಣೆಗೆ ಕರೆಸಿಕೊಂಡು ವಿಚಾರಣೆಗೊಳಪಡಿಸಿದರು.

    ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಇಬ್ಬರು ಡಿಸಿಪಿ, ಎಸಿಪಿ ವಾಸುದೇವ, ಡಿವೈಎಸ್​ಪಿ ಚಂದ್ರಶೇಖರ ಹಾಗೂ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿ, ಜಿ.ಪಂ. ಹಾಲಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿ ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸಿಬಿಐ ತಂಡವು ಇನ್ನೂ ಹಲವರಿಗೆ ನೋಟಿಸ್ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ತನಿಖೆ ಮುಂದುವರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts