More

    ಪೈರಿಗೆ ಪೂಜೆ, ಸಮೃದ್ಧ ಬೆಳೆಗೆ ಪ್ರಾರ್ಥನೆ

    ಶಿರಸಿ: ಭೂತಾಯಿಗೆ ಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳು ಶನಿವಾರ ತಾಲೂಕಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ಬೆಳಗ್ಗಿನಿಂದಲೇ ಪೂಜೆಯ ಸಡಗರದಲ್ಲಿದ್ದ ಮಹಿಳೆಯರು, ಮನೆಯಲ್ಲಿ ವಿಶೇಷ ಅಡುಗೆ ತಿನಿಸು ಮಾಡಿಕೊಂಡು ಎತ್ತಿನ ಗಾಡಿ, ಟ್ರಾ್ಯಕ್ಟರ್ ಮುಂತಾದ ವಾಹನಗಳ ಮೂಲಕ ತಮ್ಮ ಜಮೀನುಗಳಿಗೆ ತೆರಳಿ ಅಡಕೆ ಮರ ಅಥವಾ ಇತರ ಬೆಳೆ ಗಿಡಗಳಿಗೆ ಸೀರೆ, ಕುಪ್ಪಸ, ತಾಳಿ ತೊಡಿಸಿ, ಚಪ್ಪರ ಹಾಕಿ ವಿಶೇಷ ಅಲಂಕಾರ ಮಾಡಿ, ಶ್ರದ್ಧಾ ಭಕ್ತಿಯಿಂದ ಪೂಜಿಸಿದರು.

    ಕೃಷಿಕರು ಕುಟುಂಬ ಸಮೇತರಾಗಿ ಗದ್ದೆ/ತೋಟಗಳಿಗೆ ಆಗಮಿಸಿ ಅತ್ಯಂತ ಶ್ರದ್ಧೆಯಿಂದ ಹುಣ್ಣಿಮೆ ಆಚರಿಸಿದರು. ನಸುಕಿನಲ್ಲಿ ಎದ್ದು ವಿವಿಧ ಜಾತಿಯ ಸೊಪ್ಪಿನಿಂದ ಬೇಯಿಸಿದ ಮಿಶ್ರಣವನ್ನು ಕೃಷಿ ಕ್ಷೇತ್ರದಲ್ಲಿ ಬೀರಿ ಸಮೃದ್ಧ ಬೆಳೆ ನೀಡು ಎಂದು ಪ್ರಾರ್ಥಿಸಿದರು.

    ಹಬ್ಬದ ವಿಶೇಷ ಖಾದ್ಯವಾದ ಕಡಬನ್ನು ಮಾಡಿ ನೈವೇದ್ಯ ಅರ್ಪಿಸಿದರು. ತೆನೆಗಟ್ಟಿ ನಿಂತಿರುವ ಗದ್ದೆಯಲ್ಲಿ ಚರಗ ಬೀರಿದ ನಂತರ ಬೆಳಗಿನ ಉಪಹಾರ ಸೇವಿಸಿದರು.

    ಸಂಭ್ರಮದ ಶೀಗೆ ಹುಣ್ಣಿಮೆ

    ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಶನಿವಾರ ರೈತರು ಶೀಗೆ ಹುಣ್ಣಿಮೆ(ಭೂಮಿ ಪೂಜೆ)ಯನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

    ಕುಟುಂಬದ ಸದಸ್ಯರೆಲ್ಲ ಸೇರಿ ತಮ್ಮ ತಮ್ಮ ಹೊಲಗಳಿಗೆ ಮತ್ತು ತೋಟಗಳಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್​ಗಳಲ್ಲಿ ಹೋಗಿ ಭೂಮಿಗೆ ಪೂಜೆ ಮಾಡಿದರು.

    ಬೆಳೆದು ನಿಂತ ಪೈರಿನಲ್ಲಿನ ಒಂದು ಜಾಗದಲ್ಲಿ ಉಡಿ ಉಂಬಿ ಸೀರೆ, ಕುಪ್ಪಸ ತೊಡಿಸಿ, ಪಾಂಡವರ ಮೂರ್ತಿ ಮಾಡಿ, ಅವುಗಳಿಗೆ =ರೈತ ಕುಟುಂಬದವರು ಪೂಜೆ ಸಲ್ಲಿಸಿದರು. ವಿಶೇಷ ಬಗೆಯ ಸಿಹಿ ಕುಂಬಳಕಾಯಿ ಕಡುಬು ಮತ್ತು ನಾನಾ ತರದ ಖಾದ್ಯ ಭೂಮಿ ತಾಯಿಗೆ ನೈವೇದ್ಯ ಅರ್ಪಿಸಲಾಯಿತು. ನಂತರ ಫಸಲು ಸಮೃದ್ಧವಾಗಿರಲೆಂದು ಹೊಲದ ಸುತ್ತಲೂ ಐದು ಬಗೆಯ ಪದಾರ್ಥ ಚೆರಗದ ರೂಪದಲ್ಲಿ ಚೆಲ್ಲಲಾಯಿತು. ನಂತರ ಕುಟುಂಬದ ಸದಸ್ಯರು ಬಂಧು ಮಿತ್ರರೊಂದಿಗೆ ಭೋಜನ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts