More

    ಪೇಪರ್ ಮಿಲ್​ಗೆ ಟ್ರಕ್​ಗಳ ಪ್ರವೇಶಕ್ಕೆ ನಿರ್ಬಂಧ

    ದಾಂಡೇಲಿ: ನಗರದಲ್ಲಿ ಎಲ್ಲವೂ ಸ್ಥಬ್ಧಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಿಂದ ವೆಸ್ಟ್ ಕೋಸ್ಟ್ ಪೇಪರ್ ಮಿಲ್​ಗೆ ಕಚ್ಚಾ ವಸ್ತು ತುಂಬಿಕೊಂಡು ಬರುವ ಕೇರಳ ಮತ್ತು ಮಹಾರಾಷ್ಟ್ರದ ಟ್ರಕ್​ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದಿನಕ್ಕೆ ಕೇವಲ 15 ಟ್ರಕ್​ಗಳಿಗೆ ಮಾತ್ರ ಕಚ್ಚಾ ವಸ್ತು ಖಾಲಿಮಾಡಲು ಅನುಮತಿ ನೀಡಲಾಗಿದೆ.

    ಕಚ್ಚಾ ವಸ್ತು ಇಳಿಸುವ ಪೂರ್ವದಲ್ಲಿ ಪ್ರತಿ ಟ್ರಕ್ ಅನ್ನು ಸ್ಯಾನಿಟೈಸರ್ ಬಳಿಸಿ ತೊಳೆಸಲಾಗುತ್ತಿದೆ. ಎರಡು ಗೇಟ್​ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಟ್ರಕ್ ಚಾಲಕನನ್ನು ಹೊರೆತು ಪಡಿಸಿ ಕಾರ್ಖಾನೆಯ ಒಳಗೆ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ.

    ಸರಳ ಅಂತ್ಯಕ್ರಿಯೆ: ವಯೋ ಸಹಜವಾಗಿ ಇಬ್ಬರು ವೃದ್ಧರು ನಗರದಲ್ಲಿ ಭಾನುವಾರ ಮೃತ ಪಟ್ಟ ಕಾರಣ ನಗರದ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಷರತ್ತು ವಿಧಿಸಿ ಅಂತ್ಯ ಕ್ರಿಯೆಗೆ ಅವಕಾಶ ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts