More

    ಪುಣ್ಯ ಪುರುಷ ವಾಲ್ಮೀಕಿ



    ಹಾಸನ : ಧಾರ್ಮಿಕ ಹಾಗೂ ಸಾಂಸ್ಕೃತಿಕವಾದ ಮಹಾನ್ ಗ್ರಂಥವನ್ನು ರಚಿಸಿದ ಪುಣ್ಯ ಪುರುಷ ಮಹರ್ಷಿ ವಾಲ್ಮೀಕಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


    ಚನ್ನರಾಯಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ತಾಲೂಕು ವಾಲ್ಮೀಕಿ ನಾಯಕ ಸಂಘದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.


    ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಮೂಲಕ ಅತಿ ಹಿಂದುಳಿದ ಸಮಾಜದ ವ್ಯಕ್ತಿಯು ಶಾಸನ ಸಭೆಯಲ್ಲಿ ಶಾಸಕನಾಗಿ ಆಯ್ಕೆಯಾಗುವ ಅವಕಾಶ ನೀಡಿದ್ದು ರಾಜಕೀಯ ದಿಗ್ಗಜ ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದು ತಿಳಿಸಿದರು.


    ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ ಮೂಲಕ ಹಿಂದುಳಿದ ಸಮುದಾಯವನ್ನು ರಾಜಕೀಯವಾಗಿ ಮುನ್ನಲೆಗೆ ತರುವಲ್ಲಿ ಶ್ರಮಿಸಿದ ಎಚ್.ಡಿ.ದೇವೇಗೌಡರು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.


    ಸರ್ಕಾರವು ಆರ್ಥಿಕ ಹಾಗೂ ಶೈಕ್ಷಣಿಕ ಸಮಾನತೆಗೆ ಪೂರಕವಾಗಿ ಮೀಸಲಾತಿ ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಅನುದಾನ ನೀಡುವಲ್ಲಿ ತಾರತಮ್ಯವಿದೆ. ಪ್ರತಿ ಇಲಾಖೆಯಲ್ಲಿಯೂ ಮೀಸಲಾತಿಗೆ ಮಿತಿ ಏರಲಾಗಿದೆ. ಆಯಾ ಸಮುದಾಯಗಳ ನಿಗಮಕ್ಕೆ ಶೇಕಡವಾರು ಅನುದಾನ ನೀಡುವ ಕೆಲಸವಾಗಬೇಕು. ಆದರೆ ಯಾವುದೇ ನಿಗಮಗಳಿಗೂ ಸರಿಯಾದ ಅನುದಾನ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರು.


    ಹೆಸರಿಗಷ್ಟೇ ನಿಗಮಗಳ ಸ್ಥಾಪನೆಯಾಗಿದ್ದು, ಯಾವುದೇ ಯೋಜನೆ ಅಥವಾ ಮೀಸಲಾತಿ ಸಿಗುತ್ತಿಲ್ಲ. 100 ಮಂದಿ ಅರ್ಜಿ ಸಲ್ಲಿಸಿದರೆ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ ಮೀಸಲಾತಿ ಅಥವಾ ಇತರೆ ಸೌಲಭ್ಯ ದೊರೆಯುತ್ತಿದೆ. ಇದರಿಂದ ಸಮುದಾಯಗಳ ಸುಧಾರಣೆ ಹೇಗೆ ಸಾಧ್ಯ ಎಂದು ಸರ್ಕಾರವನ್ನು ಪ್ರಶ್ನಿಸಿದರು.


    ಅತಿಹೆಚ್ಚು ಭಾಷೆಗಳಲ್ಲಿ ತರ್ಜಿಮೆಯಾಗಿರುವ ಏಕೈಕ ಧಾರ್ಮಿಕ ಕಾವ್ಯ ರಾಮಾಯಣ. ಎಸ್‌ಟಿ ಸಮಾಜದ ಅನುಕೂಲಕ್ಕಾಗಿ ಭವನ ನಿರ್ಮಿಸುವ ಸಲುವಾಗಿ ಸೂಕ್ತ ನಿವೇಶನ ಗುರುತಿಸಲಾಗಿದ್ದು ಶೀಘ್ರವೇ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.


    ಗೂರನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಉಪನ್ಯಾಸಕ ರತ್ನಕರ್ ಮಾತನಾಡಿ, ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಬದಲಾಗದೆ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯವಿಲ್ಲ. ಆದರ್ಶ ಪುರುಷರ ತತ್ವ ಹಾಗೂ ಮಾರ್ಗದರ್ಶನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts