More

    ಪುಣ್ಯಭೂಮಿ ಉತ್ತರ ಕರ್ನಾಟಕ

    ಅಥಣಿ ಗ್ರಾಮೀಣ, ಬೆಳಗಾವಿ: ಉತ್ತರ ಕರ್ನಾಟಕ ಅನೇಕ ಕಲಾವಿದರ ಪುಣ್ಯಭೂಮಿ. ಪ್ರತಿಭಾವಂತರನ್ನು ಪ್ರೋತ್ಸಾಹಿಸಿ, ಗೌರವಿಸುವ ಕರ್ಮ ಭೂಮಿಯಾಗಿದೆ ಎಂದು ಚಲನಚಿತ್ರ ನಟ ವಿಜಯ ರಾಘವೇಂದ್ರ ಹೇಳಿದರು.

    ಅಥಣಿ ತಾಲೂಕಿನ ನಾಗನೂರ ಪಿ.ಕೆ ಗ್ರಾಮದಲ್ಲಿ ಸರಿಗಮಪ ಹಾಗೂ ಡಿಕೆಡಿ ವಿಜೇತ ಕಲಾವಿದರಿಂದ ಈಚೆಗೆ ಜರುಗಿದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗನೂರ ಪಿ.ಕೆ ಗ್ರಾಮಂದಂತಹ ಪುಟ್ಟ ಹಳ್ಳಿಯಲ್ಲಿ ವಿಪ ಸದಸ್ಯ ಲಕ್ಷ್ಮಣ ಸವದಿ ಅವರು ಜಾತ್ರೆ ಹಾಗೂ ದಸರೆ ಅಂಗವಾಗಿ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

    ಜನ ಸೇವೆಗಾಗಿ ಮಿಡಿಯುವ ಲಕ್ಷ್ಮಣ ಸವದಿ ಅವರ ಹೃದಯವಂತಿಕೆ, ನಿಸ್ವಾರ್ಥ ಗುಣಕ್ಕೆ ನಾನು ಅವರಿಗೆ ಋಣಿಯಾಗಿರುವೆ. ರಾಜಕೀಯದಲ್ಲಿ ಎತ್ತರಕ್ಕೇರಿ, ಉನ್ನತ ಹುದ್ದೆಯಲ್ಲಿದ್ದರೂ ಅವರು, ಸರಳತೆಯನ್ನು ಮರೆತಿಲ್ಲ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಲಿ ಎಂದರು.

    ವಿಪ ಸದಸ್ಯ ಲಕ್ಷ್ಮಣ ಸವದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ನಮ್ಮ ರಾಜ್ಯದ ಕಲಾವಿದರು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂಬುದು ನಮ್ಮ ಆಶಯ. ಖ್ಯಾತ ನಟ ಪುನೀತ ರಾಜಕುಮಾರ ಅವರ ಅಗಲಿಕೆಯ ನೋವು ಇನ್ನೂ ಮಾಸಿಲ್ಲ ಎಂದರು.
    ಖ್ಯಾತ ಗಾಯಕ, ಹಾಸ್ಯ ಮತ್ತು ನೃತ್ಯ ಕಲಾವಿದರಿಂದ ಮನಮೋಹಕ ಗಾನ, ಲಹರಿ, ಹಾಸ್ಯ ಹಾಗೂ ನೃತ್ಯಗಳು ನೆರೆದಿದ್ದ 20 ಸಾವಿರಕ್ಕೂ ಹೆಚ್ಚಿನ ಜನರ ಮನಸ್ಸನ್ನು ಸೂರೆಗೊಂಡವು.

    ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಅರವಿಂದ ಪಾಟೀಲ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗೋಡ, ಬಿಜೆಪಿ ಮುಖಂಡ ಚಿದಾನಂದ ಸವದಿ, ಪಿಎಸ್‌ಐ ಶಿವಶಂಕರ ಮುಕರಿ, ಬಾಳೇಶ ಸವದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts