More

    ಪುಟ್ಟರಂಗಶೆಟ್ಟರಿಗೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಪಾಠ


    ಚಾಮರಾಜನಗರ : ಉಪ್ಪಾರ ಜನಾಂಗದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸೂಕ್ತ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮುಂದಿನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ನಿಲ್ಲಲಾಗುವುದು ಎಂದು ಭಗೀರಥ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ರಮೇಶ್ ಎಚ್ಚರಿಸಿದರು.

    ಚಾ.ನಗರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ನಿರಂತರವಾಗಿ 4 ಬಾರಿ ಆಯ್ಕೆಯಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಉಪ್ಪಾರ ಸಮುದಾಯದಕ್ಕೆ ನೋವುಂಟು ಮಾಡಿದೆ ಎಂದು ಭಾನುವಾರ ಕೊಳ್ಲೇಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.


    ಬಿಜೆಪಿಯ ವಿ.ಸೋಮಣ್ಣ ಎದುರು ಭರ್ಜರಿಯಾಗಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಉಪ್ಪಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಒಂದು ವೇಳೆ ಸಮುದಾಯವನ್ನು ಕಡೆಗಣಿಸಿದರೆ ಅದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು..


    ಸಂಘದ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಮಾತನಾಡಿ, ಭಗೀರಥರ ಮುಷ್ಟಿ ಪುಟ್ಟರಂಗಶೆಟ್ಟಿ. ಅಂತಹ ಮುಷ್ಟಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಬೇರೆ ನಾಯಕರು ಕ್ಷೇತ್ರ ಹುಡುಕುತ್ತಿದ್ದರೆ ಒಂದೇ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲ್ಲುವು ಸಾಧಿಸಿದ ಪುಟ್ಟರಂಗಶೆಟ್ಟಿ ನಿಜವಾದ ಅಹಿಂದ ನಾಯಕರು. ಪ್ರಬಲ ನಾಯಕರಾದ ಸೋಮಣ್ಣ, ಬೆಂಕಿ ಮಹದೇವು, ಮಲ್ಲಿಕಾರ್ಜುನಪ್ಪ ಅವರನ್ನು ಸೋಲಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಉಪ್ಪಾರ ಜನಾಂಗದವರು ನೂರಕ್ಕೆ ನೂರರಷ್ಟು ಮತ ಹಾಕಿದ್ದಾರೆ. ಆದ್ದರಿಂದ ಕೂಡಲೇ ಸಚಿವ ಸಂಪುಟದಲ್ಲಿ ಪುಟ್ಟರಂಗಶೆಟ್ಟಿ ಅವರನ್ನು ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಮಟ್ಟದಲ್ಲಿ ಕರಪತ್ರ ಹಂಚಿ ಕಾಂಗ್ರೆಸ್ ವಿರುದ್ಧವಾಗಿ ನಿಲ್ಲುವಂತೆ ಜನರಿಗೆ ಕರೆ ನೀಡಲಾಗುವುದು ಎಂದರು.ಭಗೀರಥ ಉಪ್ಪಾರ ಸಮಾಜದ ತಾಲೂಕು ಉಪಾಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ, ದೊಡ್ಡಿಂದುವಾಡಿ ಗ್ರಾಪಂ ಸದಸ್ಯ ರಾಚಪ್ಪಾಜಿ, ಉತ್ತಂಬಳ್ಳಿ ಗುರುಮಲ್ಲು, ಮಾದೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts