More

    ಪಿ.ಎಂ.ನರೇಂದ್ರಸ್ವಾಮಿಯಿಂದ ಲಿಂಗಾಯಿತ ಮುಖಂಡರ ಮೇಲೆ ಪ್ರಕರಣ


    ಮಂಡ್ಯ : ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮುಖಂಡರ ಮೇಲೆ ಪೊಲೀಸ್ ಪ್ರಕರಣ ದಾಖಲಾಗುವಂತೆ ಮಾಡಿದವರು ಅಂದಿನ ಶಾಸಕ ಪಿ.ಎಂ.ನರೇಂದ್ರಸ್ವಾಮಿಯೇ ಹೊರತು ಹಾಲಿ ಶಾಸಕ ಡಾ.ಕೆ.ಅನ್ನದಾನಿಯಲ್ಲ ಎಂದು ಮಳವಳ್ಳಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಚಿಕ್ಕಮುಲಗೂಡು ಪುಟ್ಟಬುದ್ದಿ ಹೇಳಿದರು.


    ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ ಚಂದ್ರಶೇಖರ್, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ, ಶಾಸಕ ಅನ್ನದಾನಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಹಾಗೂ ವೀರಶೈವ ಮುಖಂಡರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿದರು ಎಂದು ನೀಡಿರುವ ಹೇಳಿಕೆಯನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.


    ರಾಜ್ಯಸಭಾ ಸದಸ್ಯರಾಗಿದ್ದ ದಿ.ಬಿ.ಪಿ.ನಾಗರಾಜಮೂರ್ತಿ ಅವರ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು ರಾಜಕಾರಣ ಮಾಡಿದವರು. ಅದೇ ರೀತಿ ಜೆಡಿಎಸ್ ಪಕ್ಷ ಅವರ ಕುಟುಂಬವರಾದ ಚಂದ್ರಶೇಖರ್ ಪತ್ನಿ ಸುಧಾ ಅವರಿಗೆ ಜಿಪಂ ಅಧ್ಯಕ್ಷ ಸ್ಥಾನ ಕೊಡಿಸುವುದರ ಜತೆಗೆ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು.


    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ಮುಖಂಡರಾದ ತೊಟ್ಟಿಮನೆ ಚನ್ನಪ್ಪ, ಬಿ.ಪಿ.ಪುಟ್ಟಬುದ್ದಿ, ರಾಜೇಶ್, ಸತೀಶ್, ನಿರಂಜನ್, ಸಂತೋಷ್, ಗುರುಸ್ವಾಮಿ, ಗಣೇಶ್ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts