More

    ಪಿಯಾಜಿಯೋ, ಅಶೋಕ ಲೆಲ್ಯಾಂಡ್ ಶೋರೂಮ್ ಉದ್ಘಾಟನೆ

    ಬಾಗಲಕೋಟೆ: ಅಟೋಮೊಬೈಲ್ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಲಕ್ಷಾಂತರ ಜನರಿಗೆ ಉದ್ಯೋಗದ ಜೊತೆಗೆ ದೈನಂದಿನ ವ್ಯಾಪಾರ- ವಹಿವಾಟು ಉದ್ಯಮಕ್ಕೆ ಸಹಕಾರಿಯಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನಗರದ ಗದ್ದನಕೇರಿ ರಸ್ತೆಯಲ್ಲಿರುವ ಹೈಟೆಕ್ ಮೋಟರ್ಸ್ ಆ್ಯಂಡ್ ಅಟೋಮೊಬೈಲ್ಸ್ನ ನೂತನ ಪಿಯಾಜಿಯೋ ಮತ್ತು ಅಶೋಕ ಲೆಲ್ಯಾಂಡ್ ಶೋರೂಮ್‌ಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಷ್ಠಿತ ಪಿಯಾಜಿಯೋ ವಾಣಿಜ್ಯ ವಾಹನಗಳು ಹಾಗೂ ಅಶೋಕ ಲೆಲ್ಯಾಂಡ್ ಲಗು ವಾಣಿಜ್ಯ ವಾಹನಗಳು ಸ್ವಾವಲಂಬಿ ಬದುಕು ನಡೆಸಲು ಯುವಕರಿಗೆ ಸಹಕಾರಿಯಾಗಿದೆ. ಸರ್ಕಾರ ಹಾಗೂ ಬ್ಯಾಂಕ್‌ಗಳು ಅನೇಕ ಸವಲತ್ತುಗಳನ್ನು ನೀಡಿದ್ದನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ಅಭಿಪ್ರಾಯಿಸಿದರು.

    ಕಾರ್ಗೋ ಮತ್ತು ಪ್ಯಾಸೆಂಜರ್ ವಿಭಾಗದಲ್ಲಿ ಸಿಎನ್‌ಜಿ ಮತ್ತು ಡೀಸೆಲ್ ವಾಹನಗಳ ರೂಪಾಂತರಗಳನ್ನು ಹೊಂದಿರುವ ಪಿಯಾಜಿಯೋ ಬಾಗಲಕೋಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಅದೇ ರೀತಿ ಅಶೋಕ ಲೇಲ್ಯಾಂಡ್ ಲಘು ವಾಹನಗಳು ಬಾಗಲಕೋಟೆ ಜಿಲ್ಲೆಯಲ್ಲಿ ಎಲ್‌ಸಿವಿ ವಿಭಾಗದಲ್ಲಿ ಮುಚೂಣಿಯಲ್ಲಿವೆ ಎಂದರು.
    ಕೆವಿಜಿಬಿ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಶ್ರೀಧರ್ ಎನ್. ಶೋರೂಮ್‌ನ ಸೇವಾ ವಿಭಾಗ ಉದ್ಘಾಟಿಸಿದರು. ಪಿಯಾಜಿಯೋ ಶೋರೂಮ್‌ನ ಸೇವಾ ವಿಭಾಗವನ್ನು ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಅಮೀತಕುಮಾರಸಿಂಗ್ ಹಾಗೂ ಅಶೋಕ ಲೆಲ್ಯಾಂಡ್ ಸೇವಾ ವಿಭಾಗವನ್ನು ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಗ್ಯಾನೇಂದರ್ ಬಕ್ಷಿ ಉದ್ಘಾಟಿಸಿದರು. ಪಿಯಾಜಿಯೋ ಸಂಸ್ಥೆ ಅಧಿಕಾರಿಗಳಾದ ವಿಜಯೇಂದ್ರ ಜೈನಾಪೂರ, ಅಜೀತಕುಮಾರ ಪೂಜಾರಿ, ಉದ್ಯಮಿ ಅರುಣಕುಮಾರ ರೊಕ್ಕಾಪುರ, ಹೈಟೆಕ್ ಮೋಟರ್ಸ್‌ನ ನಿರ್ದೇಶಕರಾದ ರಾಜೇಂದ್ರ ದೇಸಾಯಿ, ವಿನಯಕುಮಾರ ಬಾಳಿಕಾಯಿ, ಬಸವರಾಜ ತಂಗಡಿ, ರಾಜೇಶ ಭೋಸಗಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts