More

    ಪಾಲಿಕೆ ವಾಹನಗಳಿಂದ ಮತ ಜಾಗೃತಿ

    ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಮಹಾನಗರ ಪಾಲಿಕೆ ವಾಹನಗಳಿಂದ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಪಂನಿಂದ ರ‍್ಯಾಲಿ ಆಯೋಜಿಸಲಾಗಿತ್ತು. ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತ ಜಾಗೃತಿಗೆ ಸ್ವೀಪ್ ಸಮಿತಿಯಿಂದ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

    ಜನರಿಗೆ ಎಲ್ಲ ಮಾಧ್ಯಮಗಳಿಂದಲೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು. ಆಗ ಮಾತ್ರ ಹೆಚ್ಚಿನ ಮತ ಪ್ರಮಾಣ ಮಾಡಿಸಲು ಸಾಧ್ಯ. ಪ್ರತಿಯೊಬ್ಬರೂ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿರ್ಭಯವಾಗಿ ಮತದಾನ ಮಾಡಬೇಕು ಎಂದರು.
    ಹಸ್ತಾಕ್ಷರ ಅಭಿಯಾನ, ಸೆಲ್ಫಿ ಸ್ಟ್ಯಾಂಡ್, ಲ್ಯಾಂಟೀನ್‌ಗೆ ಚಾಲನೆ ನೀಡಲಾಯಿತು.

    ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮಾತನಾಡಿ, ಮೇ.೭ರಂದು ತಪ್ಪದೇ ಮತದಾನ ಮಾಡಬೇಕು. ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ಹಲವು ಕಡೆ ಜನರಿಗೆ ಮತದಾನದ ದಿನಾಂಖ ತಿಳಿದಿರುವುದಿಲ್ಲ. ಸ್ವೀಪ್ ಸಮಿತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

    ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ್ ಮಾತನಾಡಿ, ಮಹಾನಗರ ಪಾಲಿಕೆಯಿಂದ ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ್ದೇವೆ. ಕೆಲ ವಾರ್ಡ್ಗಳಲ್ಲಿ ಮತದಾನದ ಅರಿವು ಮೂಡಿಸಲಾಗಿದೆ ಎಂದರು. ಮತದಾನ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯಿಂದ ವಾಹನಗಳು ಜಗತ್ ಸರ್ಕಲ್‌ದಿಂದ ಕಣ್ಣಿ ಮಾರ್ಕೇಟ್ ಹಾಗೂ ಜಗತ್ ಸರ್ಕಲ್‌ದಿಂದ ಕಪನೂರದವರೆಗೆ ರ‍್ಯಾಲಿ ನಡೆಯಿತು. ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಎಇಇ ಶಿವನಗೌಡ ಪಾಟೀಲ್, ಪರಿಸರ ಅಭಿಯಂತರ ಸುಷ್ಮಾ ಸಾಗರ, ಸಮುದಾಯದ ವ್ಯವಹಾರ ಅಧಿಕಾರಿ ವಿಜಯಲಕ್ಷಿ ಪಟ್ಟೇದಾರ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts