More

    ಪಾಲಕರೇ ದೇವರೆಂಬ ಸಂದೇಶ ಸಾರಲು ಬೈಕ್ ಜಾಗೃತಿ

    ಚಿತ್ರದುರ್ಗ: ಪಾಲಕರೇ ಕಣ್ಣಿಗೆ ಕಾಣುವ ದೇವರು. ಅವರಿಗೆ ವಯಸ್ಸಾಗಿದೆ ಎಂದು ಮನೆಗಳಿಂದ ಹೊರಹಾಕಿ ಕ್ರೂರತ್ವ ಮೆರೆಯದೆಯೇ ಮಕ್ಕಳು ಗೌರವದಿಂದ ಕಾಣಬೇಕು…

    ಉತ್ತಮ ಸಂದೇಶದೊಂದಿಗೆ ಒಂಟಿಯಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರೈಡಿಂಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿರುವ ರಾಮನಗರದ 24 ವರ್ಷದ ಯುವತಿ ಚಿತ್ರರಾವ್ ಮಂಗಳವಾರ ರಾತ್ರಿ ಕೋಟೆನಗರಿ ಪ್ರವೇಶಿಸಿದಾಗ ಸ್ವಾಮೀಜಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಹೊರವಲಯದ ಸೀಬಾರ ಸಮೀಪದ ಸರ್ದಾರ್ ಸೇವಾಲಾಲ್ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

    ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಅತ್ಯಂತ ಪ್ರೀತಿಯಿಂದ ಸಾಕಿ, ಬೆಳೆಸಿದ ಪಾಲಕರನ್ನು ಯಾರೂ ಕಡೆಗಣಿಸಬೇಡಿ. ಪ್ರಸ್ತುತ ಪೀಳಿಗೆಗೆ ಹಿರಿಯರ ಅನುಭವ ಅತ್ಯವಶ್ಯಕ. ಈ ನಿಟ್ಟಿನಲ್ಲಿ 3.5 ಸಾವಿರ ಕಿ.ಮೀ ಬೈಕ್ ರ‌್ಯಾಲಿ ಕೈಗೊಂಡಿರುವ ಚಿತ್ರರಾವ್ ದಿಟ್ಟತನ ಎಲ್ಲರೂ ಮೆಚ್ಚಬೇಕು. ಅವರ ಪಯಣ ಸಾರ್ಥಕವಾಗಲಿ ಎಂದರು.

    ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಮುಪ್ಪಿನ ಕಾಲದಲ್ಲಿ ಮಕ್ಕಳು ತಂದೆ-ತಾಯಿ ಕಡೆಗಣಿಸಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ದುರಂತ, ಅತ್ಯಂತ ನೋವಿನ ಸಂಗತಿ. ಹೀಗಾಗಿ ಯಾವ ಫಲಾಪೇಕ್ಷೆಯಿಲ್ಲದೆ ಸ್ವಂತ ಖರ್ಚಿನಲ್ಲಿ ಬಹುದೂರದ ಪಯಣ ಮುಂದುವರೆಸಿರುವ ಯುವತಿ ಮಾದರಿಯಾಗಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಶ್ರೀ ಬಸವ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ, ತಂದೆ-ತಾಯಿ ಇಬ್ಬರೂ ಮಕ್ಕಳಿಗೆ ಎರಡು ಕಣ್ಣುಗಳಿದ್ದಂತೆ. ಅವರನ್ನು ದೂರ ಮಾಡುವ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಅಲ್ಲದೆ, ಕೆಲವರು ಮಕ್ಕಳ ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಯಾವ ಕಾರಣಕ್ಕೂ ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂದು ಸಲಹೆ ನೀಡಿದರು.

    ಗ್ರಾಪಂ ಅಧ್ಯಕ್ಷ ಶಿವಕುಮಾರ್, ಮುಖ್ಯಶಿಕ್ಷಕ ಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts