More

    ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಲಿ

    ಚಿಕ್ಕೋಡಿ: ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಸತ್ಯ, ಅಹಿಂಸೆ, ಪ್ರಾಮಾಣಿಕತೆ ಹಾಗೂ ನಂಬಿಕೆ ಮೈಗೊಡಿಸಿಕೊಳ್ಳಬೇಕು ಎಂದು ಡಾ.ಹೊಂಬಯ್ಯ ಹೊನ್ನಲಗೆರೆ ಹೇಳಿದರು.
    ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು. ಯುವ ಪೀಳಿಗೆಗೆ ಬದುಕಿನ ವೌಲ್ಯಗಳ ಕುರಿತು ಅರಿವು ಮೂಡಿಸಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಪ್ರಾಚಾರ್ಯ ಪ್ರೊ. ಉದಯಸಿಂಗ್ ರಜಪೂತ ಮಾತನಾಡಿ, ಪ್ರತಿಯೊಬ್ಬರೂ ತ್ಯಾಗ, ಪ್ರೀತಿ ಹಾಗೂ ಕರುಣೆ ಅಳವಡಿಸಿಕೊಳ್ಳಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಎಂ.ಪಾನುಬುಡೆ, ಮಹೇಶ ಮದಬಾಂವಿ, ಬಿ.ಎಸ್ಸಿ.ವಿಭಾಗದ ವಿದ್ಯಾರ್ಥಿ ನಾಗೇಶ ಕಾಗವಾಡೆ ಪ್ರಾರ್ಥಿಸಿ, ಸ್ವಾಗತಿಸಿ, ವಂದಿಸಿದರು. ಎಸ್.ಕೆ.ನಾಯಕ ನಿರೂಪಿಸಿದರು. ಜೆ.ಎಲ್.ಕದಮ, ಐ.ಕ್ಯೊ.ಎ.ಸಿ. ಸಂಯೋಜಕ ಡಾ.ವಿ.ವಿ.ಮಂಜಲಾಪೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts