More

    ಪಾರದರ್ಶಕವಾಗಿ ಖರೀದಿಸಲು ಕ್ರಮ

    ಧಾರವಾಡ: ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಸಾಮಗ್ರಿಗಳು ಕರ್ತವ್ಯನಿರತ ವೈದ್ಯ ಮತ್ತು ಸ್ಟಾಫ್ ನರ್ಸಗಳಿಗೆ ತೃಪ್ತಿಕರವಾಗಿ ಬಳಸಲು ಸಮರ್ಪಕವಾಗಿರಬೇಕು. ಈ ಹಿನ್ನೆಲೆಯಲ್ಲಿ ಬಿಡ್​ದಾರರಿಂದ ಖರೀದಿಸುವ ಸಾಮಗ್ರಿಗಳನ್ನು ಅಂತಿಮಗೊಳಿಸುವ ಪೂರ್ವದಲ್ಲಿ ಖಚಿತ ಪಡಿಸಿಕೊಂಡು ಪಾರದರ್ಶಕವಾಗಿ ಖರೀದಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೋವಿಡ್ ನಿರ್ವಹಣೆಗೆ ಬಳಸುವ ಆರೋಗ್ಯ ಸಾಮಗ್ರಿಗಳ ಮಾದರಿಗಳ ಪರಿಶೀಲನೆ ನಂತರ ಬಿಡ್​ದಾರರು, ಆರೋಗ್ಯ, ಕಿಮ್್ಸ, ಡಿಮ್ಹಾನ್ಸ್ ಆಸ್ಪತ್ರೆಗಳ ವೈದ್ಯರು ಮತ್ತು ಸ್ಟಾಫ್ ನರ್ಸಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪಿಪಿಇ ಕಿಟ್, ಸ್ಯಾನಿಟೈಸರ್, ಇಂಜೆಕ್ಷನ್, ಔಷಧ, ಎಚ್​ಐವಿ ಪಿಪಿಇ ಕಿಟ್, ಗ್ಲೌಸ್, ಎನ್-95 ಮಾಸ್ಕ್ ಸೇರಿ ಅಂದಾಜು 114ಕ್ಕೂ ಹೆಚ್ಚು ಸಾಮಗ್ರಿಗಳನ್ನು ವಿವಿಧ ಸಂಸ್ಥೆಗಳಿಂದ ಖರೀದಿಸಲು ಇ-ಟೆಂಡರ್ ಕರೆಯಲಾಗಿದೆ. ಇದರಲ್ಲಿ ಎಂಟು ಸಂಸ್ಥೆಗಳು ಭಾಗವಹಿಸಿದ್ದು, ಬಿಡ್ ತೆರೆಯುವ ಮೊದಲು ಬಿಡ್​ದಾರರು ಪೂರೈಸಲು ಇಚ್ಛಿಸಿರುವ ಸಾಮಗ್ರಿಗಳ ಮಾದರಿ ಪರಿಶೀಲನೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

    ಖರೀದಿಸುವ ಸಾಮಗ್ರಿಗಳನ್ನು ಕೋವಿಡ್ ವಾರ್ಡ್​ಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸ್ಟಾಫ್ ನರ್ಸ್​ಗಳು ಬಳಸುತ್ತಾರೆ. ತಜ್ಞ ವೈದ್ಯರ ಸಮ್ಮುಖದಲ್ಲಿ ಸಾಮಗ್ರಿಗಳನ್ನು ಸ್ವತಃ ಬಳಕೆದಾರರು ಪರಿಶೀಲಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ವೈದ್ಯರು ಮತ್ತು ಸ್ಟಾಫ್ ನರ್ಸ್​ಗಳು ಸಾಮಗ್ರಿಗಳ ಬಗ್ಗೆ ತೃಪ್ತಿ ಹಾಗೂ ತಜ್ಞ ವೈದ್ಯರ ಶಿಫಾರಸನ್ನು ಪರಿಗಣಿಸಿ ಅರ್ಹ ಬಿಡ್​ದಾರರ ತಾಂತ್ರಿಕ ಮತ್ತು ಆರ್ಥಿಕ ಬಿಡ್​ಗಳನ್ನು ತೆರೆಯಲಾಗುತ್ತದೆ. ಆಯ್ಕೆಯಾದ ಸಂಸ್ಥೆಗಳಿಗೆ ಮಾತ್ರ ಪೂರೈಕೆ ಆದೇಶ ನೀಡಲಾಗುತ್ತದೆ. ಚಿಕಿತ್ಸೆಗೆ ಖರೀದಿಸುವ ಪ್ರತಿ ವಸ್ತುಗಳು ಗುಣಮಟ್ಟದ್ದು, ತೃಪ್ತಿಕರವಾಗಿರಬೇಕು. ಪಾರದರ್ಶಕತೆ ಕಾಪಾಡಲು ಜಿಲ್ಲಾಡಳಿತ ಬಿಡ್ ತೆರೆಯುವ ಮೊದಲು ಪೂರೈಕೆಯಾಗುವ ಸಾಮಗ್ರಿ ಮಾದರಿಗಳ ಪರಿಶೀಲನೆಯ ನೂತನ ಕ್ರಮ ಕೈಗೊಂಡಿದೆ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದಿನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಕಿಮ್್ಸ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಆರೋಗ್ಯ ಸಾಮಗ್ರಿಗಳ ಖರೀದಿ ಸಮಿತಿ ನೋಡಲ್ ಅಧಿಕಾರಿ ಶಾರದಾ ಕೋಲಕಾರ, ಆರ್​ಸಿಎಚ್​ಒ ಡಾ. ಎಸ್.ಎಂ.ಹೊನಕೇರಿ, ಡಾ.ಶಶಿ ಪಾಟೀಲ, ಕಿಮ್್ಸ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ರಾಜಶೇಖರ ದ್ಯಾಬೇರಿ, ಡಿಮ್ಹಾನ್ಸ್ ವಿಜ್ಞಾನಿ ಡಾ. ವಿಜಯ ಏಣಗಿ, ಎನ್.ಎನ್.ಲಾಳಗೆ ಇತರರು ಇದ್ದರು.

    ಕೋವಿಡ್ ಚಿಕಿತ್ಸೆಗೆ ಖಾಸಗಿ ಯುನಿಟಿ ಆಸ್ಪತ್ರೆ

    ಧಾರವಾಡ: ನಗರದ 7 ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲಾ ನ್ಯಾಯಾಲಯದ ಎದುರಿನ ಇರಕಲ್ ಕಟ್ಟಡದ ಶ್ರೇಯಾ ಆಸ್ಪತ್ರೆಯ ಒಂದು ಭಾಗದಲ್ಲಿ ಯುನಿಟಿ ಹಾಸ್ಪಿಟಲ್ ಹೆಸರಿನಲ್ಲಿ ಕೋವಿಡ್ ಸೆಂಟರ್ ಸ್ಥಾಪಿಸಿ, ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

    ಇಲ್ಲಿ 65 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಉಳಿದ ಆಸ್ಪತ್ರೆಗಳನ್ನು ಕೋವಿಡ್​ಯುೕತರ ಚಿಕಿತ್ಸೆಗೆ ಬಳಸುವುದಾಗಿ ಪತ್ರ ಬರೆದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ಈ ನಿರ್ಧಾರ ಸ್ವಾಗತಾರ್ಹ. ಯುನಿಟಿ ಹಾಸ್ಪಿಟಲ್​ಗೆ ಅಗತ್ಯ ಕೆಪಿಎಂಇ ನೋಂದಣಿ, ಟ್ರೇಡ್ ಲೈಸೆನ್ಸ್, ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರಾಕ್ಷೇಪಣಾ ಪತ್ರ ಒದಗಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts