More

    ಪಾಠದ ಜತೆ ಮಾನವೀಯ ಮೌಲ್ಯ ತಿಳಿಸಿ

    ಯಾದಗಿರಿ: ಜಾಗತೀಕರಣದ ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿದರಷ್ಟೇ ಸಾಲದು. ಜತೆಗೆ ಸಂಸ್ಕಾರವನ್ನೂ ಕಲಿಸುವ ಅಗತ್ಯವಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

    ಇಲ್ಲಿನ ಚಿರಂಜೀವಿ ನಗರದಲ್ಲಿನ ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಇಂದು ವಿಚಿತ್ರವಾದ ದಿಕ್ಕಿನೆಡೆಗೆ ಸಾಗುತ್ತಿದೆ. ನಮ್ಮ ಮಕ್ಕಳು ಯಾವ ರೀತಿ ಬೆಳೆಯುತ್ತಿದ್ದಾರೆ. ಹೊರಗಡೆ ಇದ್ದಾಗ ಯಾವ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಬಗ್ಗೆ ಪಾಲಕರು ನಿಗಾವಹಿಸಬೇಕಾದ ಅವಶ್ಯಕತೆ ಇದೆ ಎಂದರು.

    ಕಳೆದ 8 ವರ್ಷಗಳಿಂದ ಶಾಂತಿ ಸದನ ಶಾಲೆ ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸುತ್ತಿರುವುದು ಶ್ಲಾಘನೀಯ ಸಂಗತಿ. ಶಿಕ್ಷಕರು ವರ್ಗಕೋಣೆಯಲ್ಲಿ ಪಾಠದ ಜತೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಧಿಕಾರಿ ಪೂರ್ಣಿಮಾ ಚೂರಿ ಮಾತನಾಡಿ, ತಂದೆ-ತಾಯಿಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ದೊಡ್ಡ ದೊಡ್ಡ ಶಾಲೆಗಳಲ್ಲಿ ಸೇರಿಸುತ್ತಾರೆ. ಹೆಚ್ಚಿನ ಅಂಕ ಪಡೆದುಕೊಳ್ಳಲು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಮಗುವಿನ ಮಾನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

    ಮಗುವಿನ ಪ್ರತಿಯೊಂದು ಚಟುವಟಿಕೆಗೆ ಪಾಲಕರು ಪ್ರೋತ್ಸಾಹ ಕೊಡಬೇಕು. ಅದರಲ್ಲಿನ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಮಾಡಬೇಕು. ಪುರುಷರು ಸಹ ಮಹಿಳೆಯರ ಕನಸಿಗೆ ರೆಕ್ಕೆ ಕಟ್ಟುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಮಾರ್ಗದರ್ಶಕರಾದ ಸವಿತಾ ಬಕ್ಕಾ, ನಮ್ಮಲ್ಲಿ ಮಕ್ಕಳಿಗೆ ಕೇವಲ ಪಾಠವನ್ನು ಕಲಿಸದೆ ಅವರಲ್ಲಿನ ಸೃಜನಶೀಲತೆ ಗುರುತಿಸಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿನ ಶಿಕ್ಷಕರು ಸದಾ ವಿದ್ಯಾರ್ಥಿಗಳ ಹಿತ ಕಾಪಾಡುತ್ತಾರೆ. ಕೇವಲ ಅಂಕಗಳನ್ನು ಹೆಚ್ಚಿಗೆ ಪಡೆದರೆ ಮಾತ್ರ ಆ ವಿದ್ಯಾರ್ಥಿ ಬುದ್ಧಿವಂತ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಅನೇಕ ಪರಿಕಲ್ಪನೆಯ ಮೂಲಕ ಮಕ್ಕಳಿಗೆ ಶಿಕ್ಷಣ ಹೊರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

    ಪ್ರಮುಖರಾದ ರಾಚನಗೌಡ ಮುದ್ನಾಳ್, ಉಪನ್ಯಾಸಕ ಸಿದ್ದರಾಮರಡ್ಡಿ ಚಿನ್ನಾಕಾರ, ಸಂಸ್ಥೆಯ ಅಧ್ಯಕ್ಷ ಸಾಹೇಬರಡ್ಡಿ ಬಕ್ಕಾ, ಕಾರ್ಯದರ್ಶಿ ಬಸವಂತರಡ್ಡಿ ವೀರಡ್ಡಿ ಇದ್ದರು. ಸುಪ್ರಿಯಾ ಬಕ್ಕಾ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ವಾರ್ಷಿ ಕ ವರದಿ ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts