More

    ಪಹಣಿ ಪತ್ರಿಕೆ ತಾಂತ್ರಿಕ ಅಡಚಣೆ ಶೀಘ್ರ ನಿವಾರಣೆ

    ಶಿರಸಿ: ತಾಂತ್ರಿಕತೆ ಅಳವಡಿಕೆಯ ಕಾರಣ ಪಹಣಿ ಪತ್ರಿಕೆಯಲ್ಲಿ ಬೆಳೆ ನಮೂದಾಗಲು ತೊಂದರೆಯಾಗುತ್ತಿದ್ದು, ಇದನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಹೇಳಿದರು.

    ತಾಲೂಕಿನ ಮೇಲಿನ ಓಣಿಕೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ರೈತರ ಅಹವಾಲು ಆಲಿಸಿದ ಅವರು, ಪಹಣಿ ಪತ್ರಿಕೆಯಲ್ಲಿ ಬೆಳೆಗಳ ದಾಖಲಾತಿ ಸರಿಯಾಗಿ ಆಗದೆ ರೈತರಿಗೆ ಸಮಸ್ಯೆಯಾಗಿದೆ ಎಂಬ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಕೆ ಹಂತದಲ್ಲಿದ್ದೇವೆ. ಈ ಸ್ಥಿತಿಯಲ್ಲಿ ತಾಂತ್ರಿಕ ಅಡಚಣೆ ಸಾಮಾನ್ಯ. ಆದರೆ, ರೈತರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಲು ಅಧಿಕಾರಿಗಳ ಜತೆ ರ್ಚಚಿಸಿ ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಬಂದೂಕು ನವೀಕರಣ ಪರವಾನಗಿಗೆ ವಿಳಂಬ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ ದೂರಿದರು. ಪರವಾನಗಿ ಅವಧಿ ಮುಕ್ತಾಯವಾದ ಬಳಿಕ ರೈತರು ನವೀಕರಣಕ್ಕೆ ತಿರುಗಾಟ ಮಾಡುವ ಬದಲು, ಅವಧಿ ಪೂರ್ಣಗೊಳ್ಳುವ ಮೂರು ತಿಂಗಳು ಮೊದಲೇ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

    1978ರ ಪೂರ್ವದಲ್ಲಿ ಅರಣ್ಯ ಅತಿಕ್ರಮಣ ಮಾಡಿ ಮಂಜೂರಾದ ಕೃಷಿ ಭೂಮಿಗಳ ಪಹಣಿ ಪತ್ರಿಕೆಯಲ್ಲಿ ರೈತರ ಹೆಸರು ನಮೂದಿಸುವ ಪ್ರಕ್ರಿಯೆ ಹಂತ ಹಂತವಾಗಿ ಮಾಡಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಕೆಲಸ ಆಗಬೇಕಿರುವುದರಿಂದ ಒಂದೊಂದೇ ಪ್ರಕರಣಗಳನ್ನಾಗಿ ಬಗೆಹರಿಸುತ್ತಿದ್ದೇವೆ ಎಂದು ಅವರು ಹೇಳಿದರು. ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts