More

    ಪರ್ವಿುಟ್ ವ್ಯವಸ್ಥೆ ಶೀಘ್ರ ರದ್ದು

    ಹುಬ್ಬಳ್ಳಿ: ಎಪಿಎಂಸಿ ವರ್ತಕರಿಗೆ ಪರ್ವಿುಟ್ ನೀಡುವ 35ಎ ಮತ್ತು 35ಬಿ ನಿಯಮದ ವ್ಯವಸ್ಥೆಯಿಂದ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ರದ್ದು ಮಾಡುವ ಬಗ್ಗೆ ನಾಲ್ಕು ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಆರ್. ಕರೀಗೌಡ ಭರವಸೆ ನೀಡಿದರು.

    ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ವಾಣಿಜ್ಯ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020’ ಕುರಿತು ವರ್ತಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಎಪಿಎಂಸಿ ಯಾರ್ಡ್​ನಲ್ಲಿ ಅರ್ಧ, ಹೊರಗೆ ಅರ್ಧ ಲೋಡ್ ಇದ್ದರೆ ಎಪಿಎಂಸಿಯಲ್ಲಿ ಎಷ್ಟು ಇರುತ್ತದೆಯೋ ಅಷ್ಟಕ್ಕೆ ಮಾತ್ರ ಸೆಸ್ ಅನ್ವಯವಾಗುತ್ತದೆ. ಹೊರಗಿನ ಲೋಡ್​ಗೆ ಸೆಸ್ ಹಾಕುವುದಿಲ್ಲ. ಈ ಕುರಿತು ಶೀಘ್ರ ಲಿಖಿತ ರೂಪದಲ್ಲಿ ಆದೇಶ ನೀಡಲಾಗುವುದು ಎಂದರು.

    ಎಪಿಎಂಸಿ ಜೀವಂತ ಇರಬೇಕಾದರೆ ಸೆಸ್ ಅನಿವಾರ್ಯ. ಸರ್ಕಾರ 35 ಪೈಸೆಗೆ ನಿಗದಿಪಡಿಸಿದೆ. ಅದು ನಿರ್ವಹಣೆಗೆ ಸಾಕಾಗಲ್ಲ. ರಾಜ್ಯದಲ್ಲಿ 6517 ಎಕರೆ ಎಪಿಎಂಸಿ ಆಸ್ತಿ ಇದೆ. ಹುಬ್ಬಳ್ಳಿಯೊಂದರಲ್ಲೇ 434 ಎಕರೆ ಆಸ್ತಿ ಇದೆ. ಇಷ್ಟು ದೊಡ್ಡ ಆಸ್ತಿ ನಿರ್ವಹಣೆಗೆ 35 ಪೈಸೆ ಸಾಕಾಗಲ್ಲ. ಯಾವುದೇ ಕಾನೂನು ಬದಲಾದರೂ ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವಿನ ಸಂಬಂಧ ಬದಲಾಗಲ್ಲ. ರೈತರಿಗೆ ಎಪಿಎಂಸಿ ಮಾರುಕಟ್ಟೆ ಮೇಲೆ ನಂಬಿಕೆ ಇದೆ. ತಲತಲಾಂತರದಿಂದ ವ್ಯಾಪಾರಿಗಳು ಹಾಗೂ ರೈತರ ನಡುವೆ ಉತ್ತಮ ಸಂಬಂಧವಿದೆ. ಯಾವುದೇ ಕಾನೂನು ಬಂದರೂ ಸಮಸ್ಯೆ ಆಗಲ್ಲ ಎಂದರು.

    ಹುಬ್ಬಳ್ಳಿ- ಧಾರವಾಡ, ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಗದಗ, ಮತ್ತಿತರ ಎಪಿಎಂಸಿಗಳ ನೂರಾರು ವರ್ತಕರು ಪಾಲ್ಗೊಂಡಿದ್ದರು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಉಮೇಶ ಗಡ್ಡದ, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    162 ಎಪಿಎಂಸಿಗಳಲ್ಲಿ ಆನ್​ಲೈನ್ ಲಿಂಕ್

    ರಾಜ್ಯದ 162 ಎಪಿಎಂಸಿ ಮಾರುಕಟ್ಟೆಗಳಿಗೆ ಇ-ನಾಮು (ಎಲೆಕ್ಟ್ರಾನಿಕ್ ನ್ಯಾಶನಲ್ ಅಗ್ರಿಕಲ್ಚರ್ ಮಾರ್ಕೆಟ್) ಲಿಂಕ್ ಮಾಡಲಾಗುವುದು. ಕೃಷಿ ಉತ್ಪನ್ನಗಳ ಆನ್​ಲೈನ್ ಮಾರುಕಟ್ಟೆ ಇದಾಗಿದ್ದು, ಒಮ್ಮೆ ನೋಂದಣಿಯಾದರೆ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಿ ಬೇಕಾದರೂ ಖರೀದಿ, ಮಾರಾಟ ಮಾಡಬಹುದು. ಸದ್ಯ ಕಲಬುರಗಿ ಮತ್ತು ಚಿಂಚೋಳಿ ಮಾರುಕಟ್ಟೆಯನ್ನು ಇ-ನಾಮು ಲಿಂಕ್ ಮಾಡಲಾಗಿದೆ. ಸದ್ಯದಲ್ಲೇ 5 ಎಪಿಎಂಸಿ ಮಾರುಕಟ್ಟೆಗಳನ್ನು ಲಿಂಕ್ ಮಾಡಲಾಗುವುದು. ನಂತರ ಹಂತ ಹಂತವಾಗಿ ಉಳಿದ ಮಾರುಕಟ್ಟೆಗಳನ್ನು ಆನ್​ಲೈನ್ ಲಿಂಕ್ ಮಾಡಲಾಗುವುದು ಎಂದು ಕರೀಗೌಡ ತಿಳಿಸಿದರು.

    ಸೆಸ್ ಹೆಸರು ತೆಗೆದು ಹಾಕಿ

    ಸೆಸ್ ಎಂಬ ಹೆಸರು ತೆಗೆದು ಸೇವಾ ಶುಲ್ಕ ಅಥವಾ ಅಭಿವೃದ್ಧಿ ಶುಲ್ಕ ಎಂದು ಬದಲಾಯಿಸಿ. ಎಪಿಎಂಸಿಯಲ್ಲಿ 35 ಪೈಸೆ ಸೆಸ್ ಇದೆ. ಹೊರಗಡೆ ಸೆಸ್ ಇಲ್ಲ. ಇದರಿಂದ ತಾರತಮ್ಯವಾಗುತ್ತಿದೆ. ಹಾಗಾಗಿ, ಎಲ್ಲರಿಗೂ ಒಂದೇ ರೀತಿ ಶುಲ್ಕ ವಿಧಿಸಿ ಎಂದು ವರ್ತಕರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಕರೀಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts