More

    ಪರಿಹಾರ ಧನಕ್ಕೆ ಅಡುಗೆ ಕಾರ್ಮಿಕರ ಒತ್ತಾಯ

    ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರ ಘೋಷಿಸಿದಂತೆ ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂದು ರಾಜ್ಯ ಅಡುಗೆ ಕೆಲಸಗಾರರು ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್ ಒತ್ತಾಯಿಸಿದೆ.

    ತಾಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಉಪ ತಹಸೀಲ್ದಾರ್ ತುಳಸಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪಗಳನ್ನು ಬಂದ್ ಮಾಡಿಸಿ, ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದರಿಂದ ಅಡುಗೆ ಕೆಲಸಗಾರರು ಮತ್ತು ಸಹಾಯಕ ಕಾರ್ಮಿಕರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ನಡುವೆ ಕಾರ್ಮಿಕರಿಗೆ 5 ಸಾವಿರ ರೂ ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಇದುವರೆಗೂ ವಿತರಿಸಿಲ್ಲ ಎಂದು ಸಂಘದ ಅಧ್ಯಕ್ಷ ಎಚ್.ವಿ.ನಾಗರಾಜ್ ಆರೋಪಿಸಿದರು.

    ಸಂಘಟನೆಯ ಹೋರಾಟದ ಒತ್ತಡದಿಂದ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲು 2019 ನೇ ಸಾಲಿನಲ್ಲಿ ಆದೇಶ ಹೊರಡಿಸಿದ್ದು ಇದು ಕೇವಲ ಕಾಗದ ಹೇಳಿಕೆಗೆ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸಿರುವ ಅಡುಗೆ ಕಾರ್ಮಿಕರಿಗೆ 5 ಸಾವಿರ ರೂ ಪರಿಹಾರ ಮತ್ತು ಗುರುತಿನ ಚೀಟಿ ವಿತರಣೆ, ಪಿಂಚಣಿ ಯೋಜನೆ ಜಾರಿ, ಕಾರ್ಮಿಕ ಅಭಿವೃದ್ಧಿಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗುತ್ತಿರುವ ಸಮಿತಿಯಲ್ಲಿ ಅಡುಗೆ ಕಾರ್ಮಿಕರಿಗೂ ಸ್ಥಾನ, 1 ಲಕ್ಷ ರೂ ವಸತಿ ಯೋಜನೆ ಮತ್ತು ಗುಂಪು ವಸತಿ ಯೋಜನೆ, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

    ಗೌರವಾಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು, ಜಿಲ್ಲಾಧ್ಯಕ್ಷ ಎಂ.ನಾರಾಯಣಚಾರ್, ಉಪಾಧ್ಯಕ್ಷ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಉಮೇಶ್, ತಾಲೂಕು ಅಧ್ಯಕ್ಷರಾದ ಟಿ.ಶ್ರೀನಿವಾಸ್ ರಾವ್, ಟಿ.ಎಚ್.ನರಸಿಂಹಮೂರ್ತಿ, ಎಸ್.ಸುರೇಶ್, ಎಚ್.ಎಲ್.ಮಂಜುನಾಥ್ ರಾವ್, ಗೌರವಾಧ್ಯಕ್ಷ ಮಿಂಡಿಗಲ್ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮೆಳೆಕೋಟೆ ಶ್ರೀನಿವಾಸ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts