More

    ಪರಿಹಾರಕ್ಕೆ ಆಗ್ರಹಿಸಿ ಹೊಳೆಆಲೂರ ಗ್ರಾಮಸ್ಥರ ಧರಣಿ

    ರೋಣ: 2019-20ನೇ ಸಾಲಿನಲ್ಲಿ ಮಲಪ್ರಭೆ ಪ್ರವಾಹದಿಂದ ತಾಲೂಕಿನ ಹೊಳೆಆಲೂರ ಗ್ರಾಮದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಫಲಾನುಭವಿಗಳು ಕೃಷಿಕ ಸಮಾಜ ಸಂಘಟನೆ ನೇತೃತ್ವದಲ್ಲಿ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು.

    ‘ಪ್ರವಾಹದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಈವರೆಗೂ ಪರಿಹಾರ ದೊರಕಿಲ್ಲ. ಆದರೆ, ಕೆಲವರಿಗೆ ಮನೆ ಹಾನಿಯಾಗದಿದ್ದರೂ ಲಕ್ಷಾಂತರ ರೂ. ಪರಿಹಾರ ನೀಡಲಾಗಿದೆ. ನಿಜವಾಗಿ ಮನೆ ಕಳೆದುಕೊಂಡ ಕೆಲವರು ಗುಡಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಕುರಿತು ಸೆ. 7ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಮೀಕ್ಷೆ ನಡೆಸಿ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಸರ್ವೆ ಕಾರ್ಯ ಕೂಡ ನಡೆಸಿಲ್ಲ’ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು. ಕೃಷಿಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ಬಸವರಾಜ ಪಾಟೀಲ, ವೀರೇಶ ಸಜ್ಜನ, ಮಹೇಶ ಕೆಂಚನಗೌಡ್ರ, ವೀರೇಶ ಹಿರೇಮಠ, ಶಾಂತವ್ವ ತೋಟದ, ಉಮಾ ಕುರಡಗಿ, ನೀಲಮ್ಮ ಕೋಟಿ, ಶಂಕ್ರಮ್ಮ ಹೂಗಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts