More

    ಪರಿಶುದ್ಧ ಭಕ್ತಿಯಿಂದ ಮೋಕ್ಷ ಪ್ರಾಪ್ತಿ: ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ

    ವಿಜಯಪುರ : ಪರಿಶುದ್ಧ ಭಕ್ತಿ ಇದ್ದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹುಬ್ಬಳ್ಳಿ ಶಾಂತಾಶ್ರಮ ಹಾಗೂ ವಿಜಯಪುರ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು. ಇಲ್ಲಿನ ಆನಂದ ನಗರದಲ್ಲಿ ದಾನಮ್ಮದೇವಿ ದೇವಸ್ಥಾನದ 9ನೇ ವಾರ್ಷಿಕ ಜಾತ್ರಾಮಹೋತ್ಸವ ಅಂಗವಾಗಿ ಶುಕ್ರವಾರ ನಡೆದ ಕಾರ್ತಿಕ ದೀಪೋತ್ಸವ ಮತ್ತು ಧರ್ಮಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ಮಹಾತ್ಮರ ವಾಣಿಯನ್ನು ಕೇಳುವುದೇ ಜೀವನದ ಪರಮ ಸೌಖ್ಯ. ವಿಭಿನ್ನ ಸಂಸ್ಕೃತಿಯ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ಹೂದೊಟವಾಗಿದೆ. ದೈವತ್ವದ ಕುರಿತು ಸಾವಿರಾರು ವರ್ಷಗಳಿಂದ ಚಿಂತನ-ಮಂಥನ ನಡೆದಿದೆ. ಭಾರತೀಯರು ಸಾಕಾರ, ನಿರಾಕಾರ ಎರಡಲ್ಲೂ ದೇವರನ್ನು ಕಾಣುತ್ತಾರೆ. ಬಸವಾದಿ ಶರಣರಿಂದ ಗೌರವಿಸಲ್ಪಟ್ಟ ಶರಣೆ ದಾನಮ್ಮದೇವಿ ಆತ್ಮ ಕಲ್ಯಾಣದೊಂದಿಗೆ ಸಮಾಜ ಕಲ್ಯಾಣ ಬಯಸಿದವರು. ಸಾಮೂಹಿಕ ಮದುವೆಯನ್ನು ನೆರವೇರಿಸಿ ಸರ್ವಜನಾಂಗವನ್ನು ಒಂದುಗೂಡಿಸಿದಳು. ಬಾಯಿಯಲ್ಲಿ ಶಿವಮಂತ್ರ, ಕೈಯಲ್ಲಿ ಕಾಯಕದ ಜತೆಗೆ ಜನರಿಗೆ ಅರಿವು ಮೂಡಿಸುವ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ಸ್ಮರಿಸಿದರು. ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸರ್ವಶ್ರೇಷ್ಠವಾದ ಮಾನವ ಜನ್ಮ ಪಡೆದ ನಾವೆಲ್ಲ ಧನ್ಯರು. ದೇವಾನುದೇವತೆಗಳ ನೆಲೆಬಿಡಾದ ಭಾರತದಲ್ಲಿ ಜನಿಸಿ ಬಂದಿರುವುದು ಮಹಾಪುಣ್ಯ. ಕಾರ್ತಿಕ ದೀಪೋತ್ಸವ ಎಂದರೆ ಒಳಗಿರುವ ಅಜ್ಞಾನವೆಂಬ ಕತ್ತಲೆಯನ್ನು ತೊರೆದು ಜ್ಞಾನ, ಪ್ರೀತಿಯ ದೀಪ ಹಚ್ಚಬೇಕು. ಜಾತಿಯತೆ, ಕಂದಾಚಾರ, ಭ್ರಷ್ಟಾಚಾರ, ಲಿಂಗ ಅಸಮಾನತೆಯ ವಿರುದ್ಧ ಅನೇಕ ಶರಣರು ಸಮರ ಸಾರಿದ್ದರು ಎಂದು ತಿಳಿಸಿದರು. ಇಂಚಲಕರಂಜಿ ಭಕ್ತಿ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ, ಋಷಿ ಆಶ್ರಮದ ಷಡಕ್ಷರಿ ಸ್ವಾಮೀಜಿ, ಸಿದ್ಧೇಶ್ವರ ಬ್ಯಾಂಕಿನ ನಿರ್ದೇಶಕ ವಿಜಯಕುಮಾರ ಇಜೇರಿ, ದಾನಮ್ಮದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಬಸವರಾಜ ಇಟ್ಟಂಗಿ, ಎಂ.ಬಿ.ಮೂಲಿಮನಿ, ರವೀಂದ್ರ ಬಾವೂರ, ಶಂಕರಗೌಡ ಪಾಟೀಲ, ಪ್ರೇಮಾ ನಂದಿ, ಎಂ.ಎಸ್. ಮೇತ್ರಿ, ಎಸ್.ಎಸ್. ಪಾಟೀಲ, ರವೀಂದ್ರ ಬಾವೂರ, ಆರ್.ಎಂ. ಮಠ, ಕಾಂತು ಬಿರಾದಾರ, ರವೀಂದ್ರ ರೂಢ ಹಾಗೂ ಬಡಾವಣೆಯ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts