More

    ಪರಿಶೀಲನೆ ಮುಗಿದರೂ ಸಿಕ್ಕಿಲ್ಲ ಪರಿಹಾರ

    ಲಕ್ಷ್ಮೇಶ್ವರ: ಹೂ ಬೆಳೆಗಾರರಿಗೆ ಸರ್ಕಾರ ಘೊಷಿಸಿರುವ ಪರಿಹಾರಧನ ನೀಡುವಂತೆ ಆಗ್ರಹಿಸಿ ಹೂವು ಬೆಳೆ ಗಾರರು ಸೋಮವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.

    ಲಾಕ್​ಡೌನ್ ಘೊಷಣೆ ಯಿಂದಾಗಿ ಹೂ ಮಾರಾಟವಾಗದೆ ಹಾನಿ ಅನುಭವಿಸಿದ್ದ ರೈತರಿಗೆ ಪ್ರತಿ ಹೆಕ್ಟೇರ್​ಗೆ ಸರ್ಕಾರ 25 ಸಾವಿರ ರೂ. ಪರಿಹಾರ ಘೊಷಿಸಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ, ಜಿಪಿಎಸ್ ಮಾಡಿದ್ದಾರೆ. ರೈತರು ತೋಟಗಾರಿಕೆ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಪರಿಹಾರ ಮಾತ್ರ ಬಂದಿಲ್ಲ. ಸರ್ಕಾರದ ಪರಿಹಾರ ಧನ ಅರ್ಹ ರೈತರಿಗೆ ಸಿಗದೆ ಕೇವಲ ಘೊಷಣೆಗೆ ಮಾತ್ರ ಸೀಮಿತವಾದಂತಾಗಿದೆ. ಕೂಡಲೇ ಹೂ ಬೆಳೆದ ಎಲ್ಲ ಬೆಳೆಗಾರರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಮನವಿ ಸ್ವೀಕರಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಪ್ರತಿಕ್ರಿಯಿಸಿ, ಕ್ರಾಪ್ ಸರ್ವೆಯಲ್ಲಿ ಹೂವಿನ ಬೆಳೆ ದಾಖಲಿಸಿಕೊಳ್ಳಲಾಗಿದ್ದು, ಸೂಕ್ತ ದಾಖಲೆಗಳಿದ್ದ ರೈತರಿಗೆ ಮೊದಲ ಹಂತದಲ್ಲಿ ಪರಿಹಾರ ಬರಲಿದೆ. ಇನ್ನು ಸೂಕ್ತ ದಾಖಲೆಗಳಿಲ್ಲದ ರೈತರು ಹೂವು ಬೆಳೆದ ಬಗ್ಗೆ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

    ಹನುಮಂತಪ್ಪ ಜಗದಮನಿ, ರೂಪೇಶ ಲಮಾಣಿ, ಅಫ್ಜಲ್ ರಿತ್ತಿ, ಸಂತೋಷ ಲಮಾಣಿ, ಇಸಾಕ್ ರಿತ್ತಿ, ಶಿವಪ್ಪ ಲಮಾಣಿ, ಉಮೇಶ ಲಮಾಣಿ, ತಿಪ್ಪಣ್ಣ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts