More

    ಪರಿಶಿಷ್ಟರಿಗೆ 75 ಯೂನಿಟ್​ವರೆಗೂ ಉಚಿತ ವಿದ್ಯುತ್​

    ಬೆಳಗಾವಿ: ಮುಂದಿನ ಒಂದು ವಾರದಲ್ಲಿ ಭೋವಿ ಅಭಿವೃದ್ಧಿ ನಿಗಮಕ್ಕೆ ಪ್ರಾಮಾಣಿಕ ಅಧ್ಯಕ್ಷರ ನೇಮಕ ಮಾಡಲಾಗುವುದು. ಭೋವಿ ಸಮುದಾಯದ ಶ್ರೀ ಸಿದ್ದರಾಮೇಶ್ವರರು ಪವಾಡ ಪುರುಷರಾಗಿದ್ದು, ಅವರಿಗೆ ಅನುಭವ ಮಂಟಪದಲ್ಲಿ ಉನ್ನತ ಸ್ಥಾನ ನೀಡಲಾಗಿತ್ತು.

    ಸಮುದಾಯದ ಜನರು ಅವರ ಆದರ್ಶ, ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು. ಭೋವಿ ಸಮುದಾಯದ ಕೊಡುಗೆಯಾಗಿ ರಸ್ತೆ, ದೇವಸ್ಥಾನ, ಕೆರೆ&ಕಟ್ಟೆಗಳು ನಿರ್ಮಾಣವಾಗುತ್ತಿವೆ. ಭೋವಿ ಸಮುದಾಯದಲ್ಲಿ ಅಂತರ್ಗತವಾಗಿರುವ ಕೌಶಲದ ಜತೆಗೆ ಉನ್ನತ ವ್ಯಾಸಂಗ ಪಡೆದು ಆಧುನಿಕ ಜ್ಞಾನ ಪಡೆದರೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಬಹುದು ಎಂದರು.

    100 ಹೊಸ ವಿದ್ಯಾರ್ಥಿ ನಿಲಯ: ಪರಿಶಿಷ್ಟರ ಅಭ್ಯುದಯಕ್ಕಾಗಿ ರಾಜ್ಯದಲ್ಲಿ 100 ಹೊಸ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ&ಧಾರವಾಡ, ಕಲಬುರಗಿ ಸೇರಿ 5 ಜಿಲ್ಲೆಗಳಲ್ಲಿ 1000 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಸಾಮರ್ಥ್ಯ ಇರುವಂತಹ ದೊಡ್ಡ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಭೋವಿ ಗುರುಪೀಠದ ಶ್ರೀ ನಿರಂಜನ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಶ್ರೀ ಸಿದ್ಧರಾಮೇಶ್ವರರ ಅಧ್ಯಯನ ಪೀಠ ಹಾಗೂ ಸಂಶೋಧನ ಕೇಂದ್ರ ಸ್ಥಾಪನೆ, ನಿಗಮಕ್ಕೆ ಅಧ್ಯಕ್ಷರ ನೇಮಕ, ಪರಿಶಿಷ್ಟ ಜಾತಿಗೆ ಮೀಸಲಿರುವ ಅನುದಾನದಲ್ಲಿ ಶೇ.50 ಭೋವಿ ಸಮಾಜದ ಅಭಿವೃದ್ಧಿಗಾಗಿ ಅನುದಾನಕ್ಕೆ ಸಿಎಂಗೆ ಮನವಿ ಸಲ್ಲಿಸಿದರು.

    ಭೋವಿ ಮಠಕ್ಕೆ 21 ಕೋಟಿ ರೂ. ಅನುದಾನ: ಭೋವಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್​, ಚಿತ್ರದುರ್ಗದ ಭೋವಿ ಮಠಕ್ಕೆ 21 ಕೋಟಿ ರೂ. ಅನುದಾನಕ್ಕೆ ಸಿಎಂ ಅನುಮೋದನೆ ನೀಡಿದ್ದಾರೆ ಎಂದರು. ಚಿತ್ರದುರ್ಗ ಮಾಜಿ ಸಂಸದ ಜನಾರ್ಧನಸ್ವಾಮಿ, ರವಿ ಮಾಕಳಿ, ನೆಲಮಂಗಲ ಮಾಜಿ ಶಾಸಕ ನಾಗರಾಜು ಸೇರಿ ಸಮುದಾಯದ ಮುಖಂಡರು ಮಾತನಾಡಿದರು. ಸಚಿವ ಬಿ.ಸಿ.ನಾಗೇಶ್​, ಸಂಸದ ಜಿ.ಎಸ್​.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಭೋವಿ ಸಂದ ಜಿಲ್ಲಾಧ್ಯಕ್ಷ ಓಂಕಾರ್​, ಪಾಲಿಕೆ ಸದಸ್ಯ ಮಂಜುನಾಥ್​ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts