More

    ಪರವಾನಗಿ ಇಲ್ಲದ ನಾಡಬಂದೂಕುಗಳ ವಶ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಪ್ರಕರಣ ವಿಡಿಯೋ ಹರಿಬಿಟ್ಟ ಮಜರಾ ರಾಯಪ್ಪಲ್ಲಿ ಗ್ರಾಮಸ್ಥರು

    ಚಿಂತಾಮಣಿ: ಪರವಾನಗಿ ಇಲ್ಲದ ನಾಡಬಂದೂಕುಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ವಾಡದ ತಾಲೂಕಿನ ಬಟ್ಲಹಳ್ಳಿ ಪೊಲೀಸರ ನಡೆ ಖಂಡಿಸಿರುವ ಗ್ರಾಮಸ್ಥರು, ಬಂದೂಕುಗಳನ್ನು ವಶಪಡಿಸಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಖಾಕಿ ನಡೆ ಚರ್ಚೆಗೆ ಗ್ರಾಸವಾಗಿದೆ.
    ಠಾಣೆ ವ್ಯಾಪ್ತಿಯ ಮಜರಾ ರಾಯಪ್ಪಲ್ಲಿಯಲ್ಲಿ ಪರವಾನಗಿ ಇಲ್ಲದ ಎರಡು ನಾಡ ಬಂದೂಕುಗಳಿರುವ ವಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನವೀನ್ ಹಾಗೂ ನರಸಿಂಹ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ನೋಟೀಸ್ ನೀಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
    ಪ್ರಕರಣದ ಹಿನ್ನಲೆ: ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಮತ್ತೊಬ್ಬ ಗ್ರಾಮದ ಹೊರವಲಯದ ನೀರಿನ ಕುಂಟೆಯಲ್ಲಿ ಬಂದೂಕನ್ನು ಬಿಸಾಡಿದ್ದ. ಇಬ್ಬರನ್ನು ವಿಚಾರಣೆಗೆ ಒಳಪಡಿಸಿ ಕುಂಟೆಯಲ್ಲಿ ಬಿಸಾಡಿದ್ದ ಬಂದೂಕನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ವಾಡದೆ ನೋಟಿಸ್ ನೀಡಿ ಠಾಣೆಗೆ ಕರೆಸಿಕೊಂಡು ಹೇಳಿಕೆ ಪಡೆದು ಕೈ ತೊಳೆದುಕೊಂಡಿದ್ದಾರೆ ಎನ್ನಲಾಗಿದೆ.

    ಸಿಕ್ಕಿದ್ದಿರೆ ಅಕ್ರಮವಾಗಲ್ಲ…!: ಆರೋಪಿಗಳಿಗೆ ಬಂದೂಕು ಅರಣ್ಯದಲ್ಲಿ ಸಿಕ್ಕಿದೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಆರೋಪಿಗಳು ಬಂದೂಕುಗಳನ್ನು ಅಕ್ರಮವಾಗಿ ಇಟ್ಟುಕೊಂಡಿಲ್ಲ ಎನ್ನುವ ಮೂಲಕ ಪೊಲೀಸರೇ ಅರೋಪಿಗಳ ಪರ ನಿಂತಿದ್ದಾರೆ ಎಂದು ಗ್ರಾಮಸ್ಥರು ಆರೋಪಿದ್ದಾರೆ. ಅಲ್ಲದೆ ವಿಡಿಯೋಗಳನ್ನು ಹರಿಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
    ಪರವಾನಿಗೆ ಇಲ್ಲದ ಬಂದೂಕುಗಳು ಗ್ರಾಮದವರಿಗೂ ಬಂದಿದ್ದಾದರೂ ಹೇಗೆ? ಇನ್ನೆಷ್ಟು ಬಂದೂಕುಗಳು ಠಾಣೆ ವ್ಯಾಪ್ತಿಯಲ್ಲಿವೆ? ಆರೋಪಿಗಳ ಬಗ್ಗೆ ವಾಹಿತಿ ಕೊಟ್ಟವರು ಯಾರು? ಎಂಬ ಪ್ರಶ್ನೆಗಳ ಜತೆಗೆ ಅನಾಹುತ ಸಂಭವಿಸುವ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.

    ಎರಡು ನಾಡಬಂದೂಕುಗಳು ಅರಣ್ಯದಲ್ಲಿ ಬಿಸಾಡಿರುವ ಬಗ್ಗೆ ವಾಹಿತಿ ಸಿಕ್ಕಿದ್ದು, ಅವರುಗಳನ್ನು ಇರಿಸಿಕೊಂಡಿರುವವರನ್ನು ಬಂಧಿಸಿ ಬಂದೂಕುಗಳನ್ನು ವಶಪಡಿಸಿಕೊಂಡಿರುವ ಗಮನಕ್ಕೆ ಬಂದಿದೆ. ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ.
    ನಾರಾಯಣಸ್ವಾಮಿ ಬಟ್ಲಹಳ್ಳಿ ಪಿಎಸ್‌ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts