More

    ಪರವಾನಗಿ ಇಲ್ಲದೇ ಮಿನಿ ಬಸ್ ಚಲಾಯಿಸಿ ಸರಣಿ ಅಪಘಾತ

    ಬೆಂಗಳೂರು:
    ಚಾಲನಾ ಪರವಾನಿ ಹೊಂದದಿದ್ದರೂ ಮಿನಿ ಬಸ್ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ಸರಣಿ ಅಪಘಾತ ನಡೆಸಿದ ಪರಿಣಾಮ ಐವರಿಗೆ ಗಾಯಗಳಾಗಿವೆ.
    ಮಿನಿ ಬಸ್ ಚಾಲಕ ಮಲ್ಲೇಶ್ವರ ನಿವಾಸಿ ಪ್ರೀತೇಶ್ (28) ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ವೈಯಾಲಿಕಾವಲ್‌ನ ವಿನಾಯಕ ವೃತ್ತದ ಕರ್ನಾಟಕ ಬಿರಿಯಾನಿ ಸೆಂಟರ್ ಹೋಟೆಲ್ ಬಳಿ

    ಶನಿವಾರ ಮಧ್ಯಾಹ್ನ 3.10ರಲ್ಲಿ ದುರ್ಘಟನೆ ಸಂಭವಿಸಿದೆ. ಪರವಾನಗಿ ಇಲ್ಲದಿದ್ದರೂ ಪ್ರೀತೇಶ್ ಅಜಾಗರೂಕತೆಯಿಂದ ಮಿನಿ ಬಸ್ ಚಲಾಯಿಸಿದ ಪರಿಣಾಮ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts