More

    ಪದವಿ ಕಾಲೇಜಿಗೆ ಸಿಗಲಿ ಸ್ವಾಯತ್ತತೆ, ಶಾಸಕ ಶರತ್ ಬಚ್ಚೇಗೌಡ ಆಶಯ, ಸರ್ಕಾರದಮಟ್ಟದಲ್ಲೂ ಚರ್ಚಿಸುವ ಭರವಸೆ

    ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ವಿವಿಯ ಸ್ವಾಯತ್ತತೆಯ ಕಾಲೇಜೆಂದು ೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ನಾನೂ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಚಿವರ ಬಳಿ ಮಾತನಾಡಿ ಮಾನ್ಯತೆ ಕೊಡಿಸಲು ಶ್ರಮಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ 84 ವಿದ್ಯಾರ್ಥಿಗಳಿಗೆ 7,64,000 ರೂ. ಮೊತ್ತದ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಮಾತನಾಡಿದರು. ಈ ಭಾಗದ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ ಎಂದರು.

    ಗ್ರಾಮಾಂತರ ಭಾಗದ 84 ವಿದ್ಯಾರ್ಥಿನಿಯರಿಗೆ ತಲಾ 8 ರಿಂದ 10 ಸಾವಿರ ರೂ. ವೇತನ ನೀಡುವುದು ಮಾದರಿ ಕಾರ್ಯ ಎಂದರು.
    ಪ್ರಾಂಶುಪಾಲ ಡಾ. ಮುನಿನಾರಾಯಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹೊಸಕೋಟೆ ಕಾಲೇಜು ಪ್ರಥಮ ಶ್ರೇಯಾಂಕ ಪಡೆದಿದೆ. ಕಾಲೇಜಿನಲ್ಲಿ 1,650 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪೂರಕ ಸಹಕಾರ ನೀಡಲು ಮಲಬಾರ್ ಚಾರಿಟಬಲ್ ಟ್ರಸ್ಟ್ ಮುಂದಾಗಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಸೌಲಭ್ಯ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದರು.
    ವಿವಿ ಉತ್ತರ ಸಿಂಡಿಕೇಟ್ ಸದಸ್ಯ ದೇವರಾಜ್ ಮಾತನಾಡಿ, ಸ್ನಾತಕೋತ್ತರ ವಿಭಾಗದ ರಸಾಯನಿಕ ಶಾಸಿ ವಿಭಾಗದ ದಾಖಲಾತಿಗೆ 50 ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಅವಕಾಶ ನೀಡಲಾಗಿದೆ. ಹಾಗೆಯೇ ಎಂಎಸ್‌ಸಿ ಪದವಿಗೆ ಕಳೆದ ವರ್ಷ 30 ಮಂದಿಗೆ ನೀಡಿದ್ದ ಅವಕಾಶವನ್ನು ಈ ವರ್ಷ 50 ಮಂದಿ ವಿಸ್ತರಿಸಲಾಗಿದೆ ಎಂದರು.

    ಮಲಬಾರ್ ಚಾರಿಟಬಲ್ ಟ್ರಸ್ಟ್ ನೌಕರ ಹೇಮಂತ್ ಕುಮಾರ್ ಮಾತನಾಡಿ, ಸಂಸ್ಥೆ ಬಡವರಿಗೆ ಆರೋಗ್ಯ, ಪರಿಸರ, ಅಂಗವಿಕಲರಿಗೆ ಹಾಗೂ ಬಡವರಿಗೆ ಸಹಾಯ ಹಸ್ತ, ಬಡವರಿಗೆ ಮನೆ ಕಟ್ಟಲು ಸಹಾಯ ಧನ ಹಾಗೂ ರಾಜ್ಯಾದ್ಯಂತ 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದೆ ಎಂದು ತಿಳಿಸಿದರು.

    ಟೌನ್ ಬ್ಯಾಂಕ್ ನಿರ್ದೇಶಕರಾದ ರಾಜಶೇಖರ್, ಅರುಣ್ ಕುಮಾರ್, ವಿವಿ ಸಿಂಡಿಕೇಟ್ ಸದಸ್ಯ ದೇವರಾಜ್, ಕಸಾಪ ಅಧ್ಯಕ್ಷ ಎಚ್.ಎಂ. ಮುನಿರಾಜ್, ಮಲಬಾರ್ ಚಾರಿಟಬಲ್ ಟ್ರಸ್ಟ್ ಸಿಬ್ಬಂದಿ ರಾಘವೇಂದ್ರ ಶಟ್ಟಿ, ಹೇಮಂತ್ ಕುಮಾರ್, ಮುಖಂಡರಾದ ನಟರಾಜ್, ಬಚ್ಚಣ್ಣ, ನವಾಜ್ ಹಾಜರಿದ್ದರು.

    ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿ, ಧರ್ಮದ ನಡುವೆ ದ್ವೇಷ ಬೆಳೆಸುವುದು ಸರಿಯಲ್ಲ. ವಸ್ತ್ರ ಸಂಹಿತೆ ಹಕ್ಕನ್ನು ಸಂವಿಧಾನದಲ್ಲೇ ನೀಡಲಾಗಿದೆ. ಪ್ರಜಾಪ್ರಭುತ್ವ ದೇಶವಾದ್ದರಿಂದ ನಿಗದಿತ ವಸ ಧರಿಸಬೇಕು ಎಂದು ಒತ್ತಡ ಹೇರುವುದು ತಪ್ಪು.
    ಶರತ್ ಬಚ್ಚೇಗೌಡ
    ಶಾಸಕ, ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts