More

    ಪತ್ರಕರ್ತರ ಹೈಟೆಕ್ ಭವನ ನಿರ್ಮಾಣ ಶೀಘ್ರ

    ಹುಕ್ಕೇರಿ: ಆತ್ಮಸಾಕ್ಷಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ಯಾವುದೇ ವರದಿ ಮಾಡುವ ಮುನ್ನ ನಿಮ್ಮ ಆತ್ಮಕ್ಕೆ ನಾನು ವರದಿ ಮಾಡುತ್ತಿರುವುದು ಸರಿಯಾಗಿದೆ ಎನಿಸಿದರೆ ಮುಲಾಜಿಲ್ಲದೆ ವರದಿ ಮಾಡಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ.

    ಪಟ್ಟಣದ ತಾಪಂ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಕಾರ್ಯಾಗಾರ ಮತ್ತು ಪತ್ರಿಕಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

    ಹುಕ್ಕೇರಿಯಲ್ಲಿ ಶೀಘ್ರ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಿಸುವ ಆಶಯ ಹೊಂದಿದ್ದು ಅದಕ್ಕಾಗಿ ಪತ್ರಕರ್ತರ ಅನುಕೂಲಕ್ಕಾಗಿ ಶಾಸಕ ಉಮೇಶ ಕತ್ತಿ ಅವರ ಅನುದಾನ ಬಳಸಿಕೊಂಡು ಇ-ಲೈಬ್ರರಿ ಹೊಂದಿರುವ ಹೈಟೆಕ್ ಭವನ ನಿರ್ಮಿಸಲಾಗುವುದು. ಈ ಭವನಕ್ಕೆ ಆಧುನಿಕ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ ಎಂದರು. ಮಾಧ್ಯಮ ಎಂಬುದು ಬಹುದೊಡ್ಡ ಶಕ್ತಿ. ಆ ಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕೇ ಹೊರತು ವೈಯಕ್ತಿಕ ಹಿತಾಸಕ್ತಿಗಲ್ಲ. ಪತ್ರಕರ್ತರಿಗೆ ಸಮುದಾಯದ ಪ್ರಗತಿ ಮೂಲ ಆಶಯವಾಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಾಗಿದ್ದು ದೃಶ್ಯ ಮಾಧ್ಯಮದಲ್ಲಿ ಕೂಡಲೇ ಸುದ್ದಿ ಬಿತ್ತರಗೊಂಡರೂ ಪತ್ರಿಕಾರಂಗ ಮಹತ್ವ ಕಳೆದುಕೊಂಡಿಲ್ಲ. ಪತ್ರಕರ್ತರು ವೃತ್ತಿ ಪಾವಿತ್ರೃ ಕಾಪಾಡಿಕೊಂಡು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ ಮಾಡಬೇಕು. ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಜನಸಾಮಾನ್ಯರ ಧ್ವನಿ ಮತ್ತು ಸೇತುವೆಯಾಗುವ ಕೆಲಸ ಪತ್ರಕರ್ತರದ್ದಾಗಿದೆ ಎಂದರು. ಎಸ್ಪಿ ಡಾ.ಸಂಜೀವ್ ಪಾಟೀಲ ಮಾತನಾಡಿ, ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುವ ಸುದ್ದಿ ಜನರಿಗೆ ಪೂರಕವಾಗಿರಬೇಕು. ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಲು ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.

    ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ, ಜಿಲ್ಲಾ ಸಂಘಟನೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಐವರು ಪದಾಧಿಕಾರಿಗಳು ಇರಲು ಸಚಿವ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಸಹಕಾರ ಕಾರಣ ಎಂದರು.

    ಸಂಘದ ತಾಲೂಕು ಘಟಕಾಧ್ಯಕ್ಷ ರವಿ ಕಾಂಬಳೆ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ, ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನೀಲಜಗಿ, ಪರಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಅಜ್ಜಪ್ಪ ಕಲ್ಲಟ್ಟಿ, ರಾಚಯ್ಯ ಹಿರೇಮಠ, ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ಉಮೇಶ ಸಿದ್ನಾಳ, ಎ.ಬಿ.ಪಟ್ಟಣಶೆಟ್ಟಿ, ಗಿರೀಶ ದೇಸಾಯಿ, ಪುಂಡಲೀಕ ಬಾಳೋಜಿ, ಅವಿನಾಶ ಹೊಳೆಪ್ಪಗೋಳ, ಪಿ.ಜಿ.ಕೊಣ್ಣೂರ, ಶ್ರೀಶೈಲ ಹಿರೇಮಠ, ಸಂಜು ಮುತಾಲಿಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts