More

    ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ತ ರೂಪಿಸುತ್ತದೆ


    ಯಾದಗಿರಿ: ಪಠ್ಯೇತರ ಚಟುವಟಿಕೆಗಳು ವಿದ್ಯಾಥಿರ್ಗಳ ವ್ಯಕ್ತಿತ್ವವನ್ನು ರೂಪಿಸುವುದರ ಮೂಲಕ ಜೀವನಕ್ಕೆ ಮೆರಗು ನೀಡುತ್ತವೆ. ಶಾರೀರಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್ ಮುಂತಾದವು ಮಹತ್ವದ ಪಾತ್ರ ವಹಿಸುತ್ತವೆ ಎಂದು ಗುಲಬಗರ್ಾ ವಿಶ್ವ ವಿದ್ಯಾಲಯ ಕುಲಪತಿ ಡಾ.ದಯಾನಂದ ಅಗಸರ ಸಲಹೆ ನೀಡಿದರು.

    ಇಲ್ಲಿಗೆ ಸಮೀಪದ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಅಂತರ್ ಮಹಾವಿದ್ಯಾಲಯಗಳ ಯುವ ಜನೋತ್ಸವದ ಸಮಾರೋಪ ಸಮಾರಂಭವನ್ನು ಉದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಸರಿಯಲ್ಲ. ನಾನು ಕುಲಪತಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ 80ರ ದಶಕದಲ್ಲಿ ವಿದ್ಯಾಥರ್ಿಯಾಗಿದ್ದಾಗ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯಲ್ಲಿ ಭಾಗವಹಿಸಿದ್ದರಿಂದ ಕ್ರಿಡಾ ಕೋಟಾದಡಿಯಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸಾದ್ಯವಾಯಿತು ಎಂದರು.

    ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ವಿದ್ಯಾಥಿರ್ಗಳು ಆಶಾವಾದಿಯಾಗಿ ಬದುಕನ್ನು ಸಂತೋಷದಿಂದ ಸಂಭ್ರಮಿಸಬೇಕು. ಮಕ್ಕಳು ವಿದ್ಯಾಬ್ಯಾಸ ಮಾಡಿ ಒಳ್ಳೆಯ ಸ್ಥಾನ ಪಡೆದುಕೊಳ್ಳಬೇಕೆಂದು ತಂದೆ-ತಾಯಿಗಳು ತಮ್ಮ ಸುಖ-ಸಂತೋಷವನ್ನು ತ್ಯಾಗ ಮಾಡಿರುತ್ತಾರೆ. ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಗಳನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.

    ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಗೆಲವೇ ಬದುಕಲ್ಲ ಸೋಲು-ಗೆಲುವು ಸಮಾನವಾಗಿ ಸ್ವಿಕರಿಸಿದಾಗ ಬದುಕಿಗೆ ಅರ್ಥವನ್ನು, ಮೌಲ್ಯವನ್ನು ತಂದುಕೊಡುತ್ತದೆ. ಕಠಿಣ ಪರಿಶ್ರಮ, ನಿರಂತರ ಪ್ರಯತ್ನ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತದೆ. ವಿದ್ಯಾಥಿರ್ಗಳು ಪ್ರತಿಯೊಂದು ಸಂದರ್ಭದಲ್ಲಿ ಧನಾತ್ಮಕ ವಿಚಾರ ಮಾಡಬೇಕು. ಪ್ರಮಾಣಿಕ ಪ್ರಯತ್ನ ಪರಿಶ್ರಮ, ಸಾಧನೆಯ ಛಲ ಇದ್ದರೆ ಗುರಿ ತಲಪಲು ಸಾಧ್ಯ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts