More

    ಪಠ್ಯದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸಲ್ಲ: ನೈತಿಕ ಶಿಕ್ಷಣ ತರುವುದಾಗಿ ಬಿ.ಸಿ.ನಾಗೇಶ್​ ಸ್ಪಷ್ಟನೆ

    ತುಮಕೂರು: ಪಠ್ಯಕ್ರಮದಲ್ಲಿ ರಾಮಾಯಣ&ಭಗವದ್ಗೀತೆ ಅಳವಡಿಸುವ ಮಾತು ಹೇಳಿಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಹೇಳಿದರು.

    ಕೋರಾದಲ್ಲಿ ಸರ್ವಮಂಗಳ ನಾಗಯ್ಯ ಅವರ ಸ್ಮರಣಾರ್ಥ ಮಮತಾಹರ್ಷ ದಂಪತಿ 2 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕ ಶಿಣವನ್ನು ಪಠ್ಯದಲ್ಲಿ ತುರುತ್ತೇವೆ. ಇದೆಲ್ಲಾ ಹಿಂದೆ ಇದ್ದಿದ್ದೇ. ನಾವೇನು ಹೊಸದಾಗಿ ತರುತ್ತಿರುವುದಲ್ಲ ಎಂದು ಸ್ಪಷ್ಟಪಡಿಸಿದರು.

    ಈ ದೇಶದಲ್ಲಿ ಎಲ್ಲವನ್ನು ಕಲಿಸುವುದೆ ಶಿಣ. ಬರೀ ಕೆಲಸ ಕೊಡಿಸುವುದು ಶಿಣ ಅಲ್ಲ, ಅದು ಇತ್ತೀಚೆಗೆ ಆಗಿರುವಂಥದ್ದು. ಮನುಷ್ಯನ ಜೀವನಕ್ಕೆ ಮಾರ್ಗದರ್ಶನ ಕೊಡುವಂತಹ ಶಿಣ ತಪ್ಪಿ ಹೋಗಿದೆ ಎಂದರು.

    ನಾವು ನೀವು ಓದುವಾಗ ನೈತಿಕ ಶಿಣ ಅಂತಾ ಇತ್ತು. ಅದು ತಪ್ಪಿ ಹೋಗಿದೆ. ಅದೆಷ್ಟು ವರ್ಷದ ಹಿಂದೆ ರಾಮಾಯಣ, ಮಹಾಭಾರತ ನಡೆದಿತ್ತೋ ಗೊತ್ತಿಲ್ಲ. ಅದು ಇವತ್ತಿಗೂ ಹಳ್ಳಿಗಳಲ್ಲಿ ಪ್ರೇರಣೆ ಕೊಡುತ್ತಿದೆ. ಹಾಗಾಗಿ, ಮುಂದಿನ ಪೀಳಿಗೆಗೆ ಆ ತರಹದ ನೈತಿಕ ಶಿಣವನ್ನು ಕೊಡುವ ನಿಟ್ಟಿನಲ್ಲಿ ನಾವು ಪಠ್ಯದಲ್ಲಿ ಸೇರಿಸುತ್ತಿದ್ದೇವೆ ಎಂದರು.

    ರಾಮಾಯಣ, ಮಹಾಭಾರತ, ಭಗವದ್ಗೀತೆ, ಪಂಚತಂತ್ರದಲ್ಲಿ ಇರುವಂತಹ ನೈತಿಕ ಕತೆಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು. ಯಾವುದರಲ್ಲಿ ನೈತಿಕ ಶಿಣ ಇದೆಯೋ ಅದನ್ನು ಕೊಡುತ್ತೇವೆ. ಶೇ. 95 ಇರುವ ಮಕ್ಕಳಿಗೆ ಬೇಕಾಗಿರುವುದನ್ನು ಕೊಡಲಾಗುವುದು. ಕೇವಲ ಶೇ. 5 ಇರುವವರಿಗೆ ಕೊಡಲು ಸಾಧ್ಯವಿಲ್ಲ. ನೈತಿಕ ಶಿಕ್ಷಣ ಅಂದರೆ ಧಾರ್ಮಿಕ ಶಿಕ್ಷಣ ಎಂದು ಗೊಂದಲಕ್ಕೊಳಗಾಗುವುದು ಬೇಡ. ಮಾರಲ್​ ಸೈನ್ಸ್​ನಲ್ಲಿ ದೇವರ ಪೂಜೆ ಹೇಗೆ ಮಾಡುವುದು ಎಂದು ನಾವು ಹೇಳಿ ಕೊಡುವುದಿಲ್ಲ. ಜೀವನಕ್ಕೆ ಬೇಕಾದ ಶಿಣ ಹೇಳಿ ಕೊಡ್ತಿವಿ ಎಂದು ನಾಗೇಶ್​ ತಿಳಿಸಿದರು.

    ಇದೊಂದು ಪುಣ್ಯದ ಕೆಲಸ. ಹರ್ಷ ಅವರು ತಮ್ಮ ತಾಯಿಯ ನೆನಪಿಗಾಗಿ ಶಾಲೆ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾರೆ. ಶಿಕ್ಷಣವೇ ಮರೀಚಿಕೆಯಾಗಿರುವ ದಿನಗಳಲ್ಲಿ ಮಕ್ಕಳಿಗೆ ಅನುಕೂಲಕ್ಕೆ ದಾನಿಗಳು ಮುಂದೆ ಬಂದಿರುವುದು ಮಾದರಿ ವಿಚಾರ. ಸ್ವಾತಂತ್ರಪೂರ್ವದಲ್ಲಿ ಶೇ.18 ಇದ್ದ ಸಾಕ್ಷರತೆ ಸಂಖ್ಯೆ ಈಗ ಶೇ.80ಕ್ಕೆ ತಲುಪಿರುವುದಕ್ಕೆ ಇಂತಹ ದಾನಿಗಳು ಸರ್ಕಾರದೊಂದಿಗೆ ಕೈಜೋಡಿಸಿರುವುದೇ ಕಾರಣ. ಈ ದಾನಿಗಳ ಶ್ರಮ ಸಾರ್ಥಕವಾಗಬೇಕಾದರೆ ಇಲ್ಲಿನ ಮಕ್ಕಳು ಐಎಎಸ್​, ಐಪಿಎಸ್​ ಅಧಿಕಾರಿಗಳಾಗಬೇಕು ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

    ಕೋರ ಗ್ರಾಮಕ್ಕೆ ಸಮೀಪದಲ್ಲಿ ಸುಮಾರು 13 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಇದ್ದು, ಇಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಕೌಶಲ ಭರಿತ ಕಾರ್ಮಿಕರನ್ನು ಸೃಷ್ಟಿಸಲು ಕೋರದಲ್ಲಿ ಐಟಿಐ ಕಾಲೇಜು ಶ್ರೀದಲ್ಲಿಯೇ ಮಂಜೂರು ಮಾಡಿಕೊಡಲಾಗುವುದು. ಇದರಿಂದ ಸಾವಿರಾರು ಮಕ್ಕಳಿಗೆ ಉದ್ಯೋಗ ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.

    ಕೋರಾ ಗ್ರಾಪಂ ಅಧ್ಯೆ ಎಲ್​.ನಾಗರತ್ನಾ, ಉಪಾಧ್ಯೆ ಬಿ.ಮಧೂ ನಂದೀಶ್​, ತಾಪಂ ಮಾಜಿ ಸದಸ್ಯೆ ಮಮತಾ, ಡಿಡಿಪಿಐ ಸಿ.ನಂಜಯ್ಯ, ಬಿಇಒ ಹನುಮಾನಾಯ್ಕ್​, ಎಡಿಎಂಸಿ ಅಧ್ಯಕ್ಷ ಶರತ್​ಕುಮಾರ್​, ಉಪಾಧ್ಯೆ ಯಶೋದಾ, ಹಳೆಯ ವಿದ್ಯಾರ್ಥಿ ಸಂದ ಗೌರವಾಧ್ಯಕ್ಷ ಎಲ್​.ಕಾಮಯ್ಯ, ಉಪಾಧ್ಯಕ್ಷ ರವಿಶಂಕರ್​, ಮುಖ್ಯ ಶಿಕ್ಷಕ ಕೆ.ವೆಂಕಟರಾಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಆರ್​.ಮಂಜಣ್ಣ, ಡಮರುಗ ಉಮೇಶ್​, ಗ್ರಾಪಂ ಮಾಜಿ ಅಧ್ಯಕ್ಷ ನಜೀರ್​ ಅಹಮದ್​, ನರಸಿಂಹಮೂರ್ತಿ, ಶಿವರಾಜಯ್ಯ ಇದ್ದರು.

    ಬೆಳ್ಳಿರಥದಲ್ಲಿ ದಂಪತಿ ಮೆರವಣಿಗೆ: ಕೋರಾ ಗ್ರಾಮದ ಮುಂಭಾಗದಿಂದ ಶಾಲೆಯವರೆಗೆ ದಾನಿಗಳಾದ ಮಮತಾ & ಹರ್ಷ ದಂಪತಿಯನ್ನು ಬೆಳ್ಳಿರಥದಲ್ಲಿ ಕುಳ್ಳಿರಿಸಿ, ಪೂರ್ಣಕುಂಭ ಸ್ವಾಗತ ಹಾಗೂ ವಿವಿಧ ಕಲಾ ತಂಡಗಳ ಮೂಲಕ ಶಾಲಾ ಆವರಣಕ್ಕೆ ಮೆರವಣಿಗೆಯೊಂದಿಗೆ ಕರೆತರಲಾಯಿತು. ಆ ಮೂಲಕ ದಾನಿಗಳಿಗೆ ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಪ್ರೀತಿಗೌರವ ಅರ್ಪಿಸಿದರು.

    ನನ್ನ ಬಾಲ್ಯದಲ್ಲಿ ಅಮ್ಮನ ಜತೆ ಕೋರಾಗೆ ಭೇಟಿ ನೀಡಿದ್ದ ನೆನಪು, 2 ವರ್ಷದ ಹಿಂದೆ ಈ ಮಾರ್ಗದಲ್ಲಿ ಹೋಗುವಾಗ ತಾಯಿ ನೆನಪಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಕೈಲಾದ ಕೊಡುಗೆ ನೀಡಬೇಕೆಂಬ ಉದ್ದೇಶದೊಂದಿಗೆ ಶಾಲೆ ಕಟ್ಟಡದ ಅಗತ್ಯದ ಬಗ್ಗೆ ತಿಳಿಸಿದರು. ತಕ್ಷಣವೇ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಈಗ ಸುಸಜ್ಜಿತ ಶಾಲೆ ತಲೆ ಎತ್ತಿನಿಂತಿದೆ. ಇಲ್ಲಿ ಓದುವ ಮಕ್ಕಳು ಸಹ ನಮ್ಮಂತೆಯೇ ಇತರರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಆಶಯ. ಈಗ ಸಾರ್ಥಕಭಾವನೆ ಮೂಡಿದೆ.
    > ಹರ್ಷ ಎಚ್​.ಮಠ್​ ದಾನಿ

    ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಶಾಲೆಯ ಅಭಿವೃದ್ದಿಗೆ 10 ಲಕ್ಷ ರೂಪಾಯಿ ನೀಡಲಾಗುವುದು. ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಲ್ಲಿ ತುಂಬಿ, ಅವರನ್ನು ಸುಶಿತರನ್ನಾಗಿ ಮಾಡಬೇಕು.
    > ಜಿ.ಎಸ್​.ಬಸವರಾಜು ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts