More

    ಪಂಜುರ್ಲಿ, ಗುಳಿಗ ದೈವಗಳ ಮಹಾತ್ಮ ಯಕ್ಷಗಾನ ಪ್ರದರ್ಶನ.

    ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪಂಜುರ್ಲಿ, ಗುಳಿಗ ದೈವಗಳ ಪ್ರವೇಶ ಇರುವ ಹಿರಿಯಡಕ ಕ್ಷೇತ್ರ ಮಹಾತ್ಮ ಎಂಬ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.


    ಹೇಮವಾಣಿ ಪ್ರಕಾಶನ, ಸಕಾರ್ನ್ ಪ್ರಿಂಟ್‌ವಿನ್ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಯಕ್ಷಗಾನ ಕಲಾ ಪ್ರದರ್ಶನ ಜರುಗಿತು.


    ಉಡುಪಿ ಜಿಲ್ಲೆ ಶ್ರೀಕ್ಷೇತ್ರ ಹಿರಿಯಡ್ಕ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶಿಸಿದರು. ಸಂಜೆ 7.30ಕ್ಕೆ ವೀರಭದ್ರಸ್ವಾಮಿ, ಬ್ರಹ್ಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಪ್ರದರ್ಶನ ಆರಂಭವಾಗಿ ರಾತ್ರಿ 1.30ಕ್ಕೆ ಮುಕ್ತಾಯವಾಯಿತು. 6 ಗಂಟೆ ಕಾಲ ಕಲೆಯ ಪ್ರದರ್ಶನ ಜರುಗಿತು. ನವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಾಕಿದ್ದ ವೇದಿಕೆ ವಿದ್ಯುದ್ದೀಪಾಲಕಾರದಿಂದ ಕಂಗೊಳಿಸಿತು.


    ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ಕಲಾವಿದರು ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ವೇದಿಕೆಯ ಮುಂಭಾಗದ ಆವರಣದಿಂದ ಪಂಜುರ್ಲಿ ಪ್ರದರ್ಶನದ ಕಲಾವಿದರು ವಾದ್ಯದ ನಾದದೊಂದಿಗೆ ಎರಡು ಕೈಯಲ್ಲಿ ಪಂಜು ಹಿಡಿದು ವೇದಿಕೆಗೆ ಅಗಮಿಸಿದರು.


    ಕತ್ತರಿಘಟ್ಟದ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ ಅಶೀರ್ವಚನ ನೀಡಿ ಯಕ್ಷಗಾನ ಎಂಬುದು ದೈವಗಳ ಅರಾಧನೆ. ದೇವರ ಆರಾಧನೆಯಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದರು. ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿದರು.


    ಬೆಳಿಗ್ಗೆಯಿಂದ ಕಾರ್ಯಕ್ರಮದ ಆಯೋಜಕರು ಗ್ರಾಮದೇವತೆ ವಳಗೇರಮ್ಮ ದೇವಿ ಸೇರಿ ಪಟ್ಟಣದ 48 ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿದರು. ಕಲಾವಿದ ಸಿ. ಎಸ್. ಚೇತನ್ ಪಂಜುರ್ಲಿ ಚಿತ್ರ ಬಿಡಿಸಿದರು.

    ಕಾರ್ಯಕ್ರಮದ ಆಯೋಜಕ ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣಗೋಕಾಕ್, ಸರ್ಕಾನ್ ಪ್ರಿಂಟ್‌ವಿನ್ ಮುಖ್ಯಸ್ಥ ವಿನೋದ್‌ಪೂಜಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ಅನಂದ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕೆ.ಎನ್. ಬನಶಂಕರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳುಗೋಪಾಲ್, ಎಪಿಎಂಸಿ ನಿರ್ದೇಶಕ ಎಂ. ಶಂಕರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಲೋಕೇಶ್, ರಾಜ್ಯ ಪ್ರಶಸ್ತಿ ಪುಸ್ಕೃತ ಲೋಕೇಶ್ ದಾಸ್, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆದಿಶೇಷಕುಮಾರ್, ಕಾರ್ಯದರ್ಶಿ ಎಚ್.ಎನ್. ನವೀನ್, ಬಿಜೆಪಿ ಮುಖಂಡ ಚಿದಾನಂದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts