More

    ಪಂಚಶಕ್ತಿ ವಿರಾಟ ಸಮಾವೇಶ ಡಿ.5ರಂದು

    ಬೈಲಹೊಂಗಲ, ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿ.5 ರಂದು ಸಂಜೆ 4ಕ್ಕೆ ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೈಲಹೊಂಗಲ ಲಿಂಗಾಯತ ಪಂಚಮಸಾಲಿಗರ ವಿರಾಟ ಪಂಚಶಕ್ತಿ ಸಮಾವೇಶ ಆಯೋಜಿಸುವ ಕುರಿತು ಸೋಮವಾರ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಸಭೆ ಜರುಗಿತು.

    ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ರಾಜಶೇಖರ ಮೂಗಿ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ 80 ಹಳ್ಳಿಗಳಲ್ಲಿ ಮೀಸಲಾತಿ ಸಮಾವೇಶ ಕುರಿತು ಜಾಗೃತಿ ಮೂಡಿಸಲಾಗುವುದು. ಪ್ರಚಾರದ ವ್ಯವಸ್ಥೆ, ಚನ್ನಮ್ಮನ ವೃತ್ತದಿಂದ ವೇದಿಕೆವರೆಗೆ ಸುಮಂಗಲೆಯರಿಂದ ಬೃಹತ್ ಶೋಭಾಯಾತ್ರೆ, ಸಕಲ ವಾದ್ಯಮೇಳಗಳೊಂದಿಗೆ ವಿಶ್ವಗುರು ಬಸವೇಶ್ವರ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬೆಳವಡಿ ಮಲ್ಲಮ್ಮಳ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದ್ದು, ಊಟದ ವ್ಯವಸ್ಥೆ ಇರಲಿದೆ ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಎ್.ಎಸ್.ಸಿದ್ಧನಗೌಡರ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ ಮಾತನಾಡಿ, ’ಪಂಚಮಸಾಲಿ ದೊಡ್ಡ ಸಮುದಾಯವಾಗಿದೆ. ನಮ್ಮ ಸಮುದಾಯದ ಹಕ್ಕಿಗಾಗಿ ಸಮಾವೇಶ ನಡೆಸೋಣ ಎಂದರು.

    ಮುರಗೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ, ರಾಜು ಕುಡಸೋಮಣ್ಣವರ, ಶಿವಾನಂದ ಬಡ್ಡಿಮನಿ, ಸುನೀಲ ಮರಕುಂಬಿ, ಮಹಾಂತೇಶ ಹೊಸಮನಿ, ಈರಣ್ಣ ಬೆಟಗೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts