More

    ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ, ಕೃಷ್ಣಾ ತೀರದಲ್ಲಿ ಧರ್ಮ ಸಭೆ- ವಿರಾಟ ರೈತ ಸಮಾವೇಶ

    ವಿಜಯಪುರ: ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಫೆ.13 ರಂದು ನಡೆಯಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠದ ಪೀಠಾರೋಹಣ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಬಬಲೇಶ್ವರ ಬೃಹನ್ಮಠದ ಪೂಜ್ಯ ಡಾ.ಮಹಾದೇವ ಶಿವಾಚಾರ್ಯರು ತಿಳಿಸಿದರು.
    ಸಮಾವೇಶದಲ್ಲಿ
    ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ, ಇನ್ನೂರಕ್ಕೂ ಅಧಿಕ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು‌.
    ರಾಜ್ಯದಲ್ಲಿ ಪಂಚಮಸಾಲಿ ಸಮಾಜದ ಜನ ಕೋಟಿಗೂ ಹೆಚ್ಚಾಗಿ ಬೆಳೆದಿದೆ. ಇಂಥ ಬೃಹತ್ ಸಮಾಜದ ಜಾಗೃತಿಗೆ ಪೀಠದ ಅವಶ್ಯಕತೆ ಇದೆ ಎಂದು ಹೇಳಿದರು‌.
    ಈಗಾಗಲೇ ಹರಿಹರ ಹಾಗೂ ಕೂಡಲಸಂಗಮ ಪೀಠ ಸ್ಥಾಪಿಸಲಾಗಿದೆ. ಈ ಭಾಗದಲ್ಲಿ ಸುಮಾರು 40-45 ಸ್ವಾಮೀಜಿ ಗಳು ಒಟ್ಟಾಗಿ ಮೂರನೇ ಪೀಠ ಸ್ಥಾಪಿಸಲಾಗುತ್ತಿದೆ. ಆ ಮೂಲಕ ಒಗ್ಗಟ್ಟಿನಿಂದ ಸಮಾಜ ಜಾಗೃತಿಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೂರನೇ ಪೀಠದ ಜವಾಬ್ದಾರಿ ನನ್ನ ಹೆಗಲಿಗೆ ಹೊರಸಿದ್ದು ರಾಜ್ಯದ ಎಲ್ಲರೂ ಒಟ್ಟಾಗಿ ಸಮಾಜದ ಜಾಗೃತಿ ಕೈಗೊಳ್ಳುತ್ತೇವೆ ಎಂದರು.
    ಮನಗೂಳಿಯ ಪೂಜ್ಯ ಅಭಿನವ
    ಸಂಗನವಸವ ಶ್ರೀಗಳು ಮಾತನಾಡಿ, ಬಹುದಿನದ ಕನಸೊಂದು ನನಸಾಗುತ್ತಿದೆ. ಇದು ಒಂದೇ ಸಮಾಜದ ಮಠ ಅಲ್ಲ. ಕೃಷ್ಣಾ ತೀರದ ಆಲಗೂರ ಗ್ರಾಮದಲ್ಲಿ ಪಂಚಮಸಾಲಿ ಸಮಾಜ ಕಡಿಮೆ ಸಂಖ್ಯೆಯಲ್ಲಿದೆ. ಅಲ್ಲಿನ ಜೈನ ಮತ್ತಿತರ ಸಮಾಜಗಳು ಸಮಾವೇಶದ ಯಶಸ್ವಿ ಗೆ ಶ್ರಮಿಸುತ್ತಿವೆ. ಸಮಾವೇಶದಲ್ಲಿ ಎಲ್ಲ ಸಮುದಾಯದವರಿಗೆ ಲಿಂಗ ದೀಕ್ಷೆ ನೀಡಲಾಗುವುದು. ಜೊತೆಗೆ ಧರ್ಮ ಸಭೆ ಹಾಗೂ ವಿರಾಟ ರೈತ ಸಮಾವೇಶ ಕೂಡ ನಡೆಯಲಿದೆ ಎಂದರು.
    ಕಾಶಿಯಲ್ಲಿ ತುಂಗಾ ಆರತಿ‌ ಮಾಡುವಂತೆ ಕೃಷ್ಣಾ ನದಿಯಲ್ಲಿ ಪೂಜೆ ಮಾಡಿ ತೆಪ್ಪ ಬಿಡುವ ಕಾರ್ಯ ಮಾಡಲಾಗುವುದು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಪೀಠಾರೋಹಣ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.
    ವಿಜಯಪುರ- ಬಾಗಲಕೋಟೆ, ನೆರೆಯ ಮಹಾರಾಷ್ಟ್ರ ದ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಒಕ್ಕೂಟದ ಎಲ್ಲ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
    ಬುರಾಣಪುರ ಯೋಗೇಶ್ವರಿ ಮಾತಾಜಿ ಮಾತನಾಡಿ, ಅತ್ಯಂತ ಕಡಿಮೆ ಸಮಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಸರ್ವರೂ ಸಹಕರಿಸಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.
    ಮುಖಂಡರಾದ ಸುರೇಶ ಬಿರಾದಾರ,
    ಹೊನಮಲ್ಲ ಸಾರವಾಡ, ಅಶೋಕ ಪಾಟೀಲ, ಮುತ್ತು ಜಂಗಮಶೆಟ್ಟಿ, ರವಿ‌ ಮೂಕರ್ತಿಹಾಳ, ಕಲ್ಲುಗೌಡ ಹರನಾಳ, ರಾಜು ಕಳಸಗೊಂಡ, ಶಾಂತು ಇಂಡಿ, ರಾಜುಗೌಡ ಪಾಟೀಲ, ಶಂಕರಗೌಡ ಮನಗೂಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts