More

    ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್ಸ್‌ಪೂೀ ಪ್ರದರ್ಶನಕ್ಕೆ ಚಾಲನೆ

    ಬೆಳಗಾವಿ: ತಾಜ್ ಥ್ರೆಡ್ಸ್ ಮತ್ತು ಹ್ಯಾಂಡ್ಲೂಮ್ ಗೂಡ್ಸ್ ಮತ್ತು ಯಶ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ನಗರದ ಗೋವಾವೇಸ್‌ನಲ್ಲಿರುವ ಮಂಗಲ ಮೈದಾನದಲ್ಲಿ ಆರಂಭವಾದ ‘ನ್ಯೂ ಇಂಡಿಯನ್ ಕ್ರಾಫ್ಟ್ ಎಕ್ಸ್‌ಪೋ’ವನ್ನು ಕರ್ನಾಟಕ ರಾಜ್ಯ ಹಸ್ತಕಲಾ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಮತ್ತು ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹಾದೇವ ಚೌಗುಲೆ ಈಚೆಗೆ ಉದ್ಘಾಟಿಸಿದರು.

    ಮಾರುತಿ ಅಷ್ಟಗಿ ಮಾತನಾಡಿ, ವಸ್ತುಗಳನ್ನು ತಯಾರಿಸಿದ ನಂತರ ಎಲ್ಲಿ ಮಾರಾಟ ಮಾಡುವುದು ಎಂಬ ಚಿಂತೆ ತಯಾರಕರಲ್ಲಿದೆ. ಆದರೆ, ಆಶುತೋಷ್ ಶರ್ಮಾ ಹಾಗೂ ಯಶ್ ಕಮ್ಯುನಿಕೇಷನ್‌ನಂತ ಸಂಘಟಕರು ಇದನ್ನು ಸುಲಭಗೊಳಿಸಿ ದೇಶದ ನಾನಾ ಭಾಗಗಳ ನೂರಾರು ವರ್ತಕರು, ಕುಶಲಕರ್ಮಿಗಳನ್ನು ಒಟ್ಟುಗೂಡಿಸಿದ್ದಾರೆ. ಒಬ್ಬ ವ್ಯಕ್ತಿಗೆ ಸ್ವಂತ ಮನೆಗೆ ಬೇಕಾಗುವ ವಸ್ತುಗಳು ಇಲ್ಲಿ ಲಭ್ಯ. ಇಂತಹ ಚಟುವಟಿಕೆಗಳು ಬೆಳಗಾವಿಯಲ್ಲಿ ಆಗಾಗ ನಡೆಯಬೇಕು. ಇದರಿಂದ ಬೆಳಗಾವಿಯ ಜನತೆಗೆ ಹೊಸ ಅತ್ಯಾಧುನಿಕ ವಸ್ತುಗಳನ್ನು ನೋಡಬಹುದು.ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
    ಉದ್ಯಮಿ ಮಹಾದೇವ ಚೌಗುಲೆ ಮಾತನಾಡಿ, ಉದ್ಯಮದಲ್ಲಿ ಯಾಂತ್ರೀಕರಣದಿಂದ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಉತ್ಪಾದಿಸಬಹುದು. ಆದರೆ, ಕರಕುಶಲ ಉದ್ಯಮದಲ್ಲಿ ಸ್ವಂತ ಕೈಯಿಂದ ತಯಾರಿಸಿದ ವಸ್ತುಗಳನ್ನು ಉತ್ಪಾದಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ರೀತಿಯ ವಸ್ತುಪ್ರದರ್ಶನವನ್ನು ಆಯೋಜಿಸುವ ಮೂಲಕ ಸಂಘಟಕರು ನೂರಾರು ಜನರ ಜೀವನೋಪಾಯವನ್ನು ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಣ್ಣ ಕೈಗಾರಿಕೆಗಳ ಬೆಳಗಾವಿ ಜಿಲ್ಲಾ ಸಂಯೋಜಕಿ ಪ್ರಿಯಾ ಪುರಾಣಿಕ, ಸ್ಮಿತಾ ಪಾಟೀಲ, ಶುಭಾಂಗಿ ಭೋಸಲೆ, ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ವಿಕಾಸ ಕಲಘಟಗಿ, ಅನಂತ ಲಾಡ್ ಇತರರಿದ್ದರು. ಆಯೋಜಕ ಪ್ರಕಾಶ ಕಲ್ಕುಂದ್ರಿಕರ್ ಹಾಗೂ ಅಶುತೋಷ್ ಶರ್ಮಾ ಸ್ವಾಗತಿಸಿದರು. ವಿನಯ ಕದಂ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts