More

    ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರಿಂದ ಅಡ್ಡಿ

    ಕೋಲಾರ: ಎಐಸಿಸಿ ಮುಖಂಡ ರಾಹುಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂ ಬಿಜೆಪಿ ಮುಖಂಡರು ಅಡ್ಡಿಪಡಿಸಿರುವುದ್ದನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಕಾಂಗ್ರೆಸ್​ ಭವನದ ಎದುರು ಮಂಗಳವಾರ ಪ್ರತಿಭಟಿಸಿದರು.

    ಕಾಂಗ್ರೆಸ್​ ಜಿಲ್ಲಾ ಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ದೇಶದಲ್ಲಿ ಬಿಜೆಪಿಯ ಪಾಪದ ಕೊಡ ತುಂಬಿದಿದೆ. ಇದರಿಂದಾಗಿಯೇ ರಾಹುಲ್​ ಗಾಂಧಿ ಅವರು ಮಾಡುತ್ತಿರುವ ನ್ಯಾಯ ಯಾತ್ರೆಗೆ ಉದ್ದೇಶ ಪೂರ್ವಕವಾಗಿಯೇ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.
    ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಭಾರತ್​ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ನಡೆದಿದ್ದು, ಇದಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ನ್ಯಾಯ ಯಾತ್ರೆಗೂ ಅಭೂತಪೂರ್ವ ಬೆಂಬಲ ದೊರೆತಿತ್ತು. ಇದನ್ನು ಸಹಿಸಲಾರದ ಅಸ್ಸಾಂ ಸರ್ಕಾರವು ಬಿಜೆಪಿ ಕಾರ್ಯಕರ್ತರಿಂದ ಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದರು.
    ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಜೋಡೊ ನ್ಯಾಯ ಜಾತ್ರೆ ಗುವಾಹಟಿ ನಗರಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ. ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿ ಯಾತ್ರೆಯನ್ನು ನಿಲ್ಲಿಸಲಾಗಿದೆ. ನ್ಯಾಯ ಯಾತ್ರೆಯ ದೊಡ್ಡ ಧ್ವನಿಯಿಂ ಹೆದರಿದ ಅಸ್ಸಾಂ ಸರ್ಕಾರ ಇಂತಹ ಕೃತ್ಯ ನಡೆಸಿದೆ. ಇದು ಜನರ ಧ್ವನಿ ಎಂಬುದನ್ನು ಮರೆಯಬಾರದು ಎಂದರು.
    ಕಾಂಗ್ರೆಸ್​ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​ ಮಾತನಾಡಿ, ಮೋದಿ ಸರ್ಕಾರದ ಜನರ ವಿಶ್ವಾಸ ಕಳೆದುಕೊಂಡಿದೆ. ಜನಪರ ಆಡಳಿತ ನೀಡುವಲ್ಲಿ ವಿಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಕಾಂಗ್ರೆಸ್​ ಮೇಲೆ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್​ಗೆ ಕೆಟ್ಟ ಹೆಸರು ತರುವ ಪ್ರಯತ್ನ ಬಿಜೆಯಿಂದ ಅಸ್ಸಾಂನಲ್ಲಿ ಪ್ರಾರಂಭವಾಗಿದೆ ಎಂದು ಟೀಕಿಸಿದರು.
    5 ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್​ ಶೇಕಡವಾರು ಮತಗಳನ್ನು ಪಡೆದುಕೊಂಡಿದೆ. ಇದರಿಂದ ದೇಶದಲ್ಲಿ ಬಿಜೆಪಿ ಯಾವ ಮಟ್ಟಕ್ಕೆ ಬಂದಿಳಿದಿದೆ ಎಂಬುದು ಮೋದಿಯವರಿಗೆ ಗೋಚರಿಸಿದೆ. ಇದರಿಂದ ಭಯಭೀತರಾಗಿರುವ ಅವರು ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ನ್ಯಾಯ ಯಾತ್ರೆ ಪ್ರವೇಶಿಸದಂತೆ ಮಾಡುತ್ತಿದ್ದಾರೆ. ಇದ್ಯಾವುದನ್ನು ಕಾಂಗ್ರೆಸ್​ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
    ಕಾಂಗ್ರೆಸ್​ ಮಹಿಳಾ ಟಕದ ಅಧ್ಯಕ್ಷ ರತ್ನಮ್ಮ, ಕೆಪಿಸಿಸಿ ಒಬಿಸಿ ಟಕದ ಉಪಾಧ್ಯಕ್ಷ ಮಂಜುನಾಥ್​, ಎಸ್ಸಿ ಟಕದ ಮುಖಂಡ ಕೆ.ಜಯದೇಶ್​, ನಗರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ ಬಾಬು, ಮುಖಂಡರಾದ ನಾಗರಾಜಗೌಡ, ಶ್ರೀಕೃಷ್ಣ ಮತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts