More

    ನ್ಯಾಯಾಂಗದಲ್ಲಿ ಮಹಿಳೆಯರಿಗೆ ಅವಕಾಶ – ರಾಜೇಶ್ವರಿ ಎನ್. ಹೆಗಡೆ -ನ್ಯಾಯಾಧೀಶೆ ಕಾವ್ಯಶ್ರೀ ಅವರಿಗೆ ಸನ್ಮಾನ

    ದಾವಣಗೆರೆ: ನ್ಯಾಯಾಂಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಒಳ್ಳೆಯ ಅವಕಾಶಗಳಿವೆ. ಯಾವುದೇ ರಾಜ್ಯದಲ್ಲೂ ಶೇ. 40ರಷ್ಟು ನ್ಯಾಯಾಧೀಶೆಯರಿದ್ದು ಉತ್ತಮ ಬದಲಾವಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
    ಸಿವಿಲ್ ನ್ಯಾಯಾಧೀಶೆಯಾಗಿ ನೇಮಕಗೊಂಡ ನ್ಯಾಯವಾದಿ ಎಚ್.ಎಸ್. ಕಾವ್ಯಶ್ರೀ ಅವರಿಗೆ ಜಿಲ್ಲಾ ವಕೀಲರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಗುಣಾತ್ಮಕ ತೀರ್ಪು ನೀಡುವ ಸಾಮರ್ಥ್ಯ ಮತ್ತು ಅವಕಾಶವಿರುವ ನ್ಯಾಯಾಧೀಶರ ಹುದ್ದೆ ಮಹತ್ವದ್ದಾಗಿದೆ. ಪ್ರತಿಭಾನ್ವಿತ, ಬುದ್ಧಿವಂತಿಕೆಯುಳ್ಳ ಯುವಕ-ಯುವತಿಯರು ಕಾನೂನು ವ್ಯಾಸಂಗದತ್ತ ಹೊರಳುತ್ತಿರುವುದು ಸ್ವಾಗತಾರ್ಹ ಎಂದರು.
    ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ ಕಠಿಣ ಪರಿಶ್ರಮ, ಭಾಷೆ ಮೇಲಿನ ಹಿಡಿತ ಮತ್ತು ನಿರಂತರ ಓದಿನ ಮೂಲಕ ವಕೀಲರು ತಮ್ಮ ಪಾಂಡಿತ್ಯ ಸಾಬೀತುಪಡಿಸಲು ಅವಕಾಶಗಳಿವೆ ಎಂದರು.
    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ ಅವರು, ನ್ಯಾಯಾಧೀಶೆಯಾಗಿರುವ ಕಾವ್ಯಶ್ರೀ ಅವರು ವಕೀಲಿ ವೃತ್ತಿಯ ಜತೆಗೆ ರಂಗಭೂಮಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ್, ನ್ಯಾಯಾಧೀಶರಾದ ಶಿವಪ್ಪ ಸಲಗೆರೆ, ರೇಷ್ಮಾ, ಅಫ್ತಾಬ್, ಸಮೀರ್ ಕೊಳ್ಳಿ, ಮಲ್ಲಿಕಾರ್ಜುನ್, ಸಿದ್ದರಾಜು, ನಾಜಿಯಾ ಕೌಸರ್, ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಧುಸೂದನ್ ಇತರರಿದ್ದರು.
    ನಿಶ್ಚಿತಾ ಪ್ರಾರ್ಥನೆ ಹಾಡಿದರು. ಜಿ.ಕೆ ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಎ.ಎಸ್. ಮಂಜುನಾಥ್ ವಂದಿಸಿದರು. ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts