More

    ನೇಹಾ ಕೊಲೆಗೆ ಬಜರಂಗದಳ ಖಂಡನೆ/ರಾಕ್ಷಸನಿಗೆ ಗಲ್ಲುಶಿಕ್ಷೆ ನೀಡಿ/ಸರ್ಕಾರಕ್ಕೆ ಆಗ್ರಹ ಗ್ಯಾರೆಂಟಿ ಭಜನೆ ನಿಲ್ಲಿಸಿ/ ಹೆಣ್ಣುಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಿ/ಸಿಎಂಆರ್.ಶ್ರೀನಾಥ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ನೇಹಾ ಹತ್ಯೆ ಮಾಡಿರುವ ರಾಕ್ಷಸ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸಬೇಕು. ಹೆಣ್ಣು ಮಕ್ಕಳಿಗೆ ಆ ಗ್ಯಾರೆಂಟಿ ಕೊಟ್ಟಿದ್ದೇವೆ, ಈ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಹಾದಿ ಬೀದಿಯಲ್ಲಿ ಭಜನೆ ಮಾಡುವ ಸಿಎಂ, ಡಿಸಿಎಂ ಮೊದಲು ಹೆಣ್ಣುಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಲಿ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರೆಂಟಿ ಕೊಡಲಿ ಎಂದು ಮುಖಂಡ ಸಿಎಂಆರ್ ಶ್ರೀನಾಥ್ ಆಗ್ರಹಿಸಿದರು.

    ನಗರದ ಹೊಸ ಬಸ್ ನಿಲ್ದಾಣದ ಬಳಿ ಶನಿವಾರ ಜಮಾವಣೆಗೊಂಡು ಬಜರಂಗದಳ ಕಾರ್ಯಕರ್ತರು ನೇಹಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ನೇಹಾ ಹತ್ಯೆಗೆ ನ್ಯಾಯ ಕೊಡಿಸಬೇಕು ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಮಾತನಾಡದರು.

    ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ನೇಹಾಹಿರೇಮಠ್ ಹತ್ಯೆ ಪ್ರಕರಣ ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಕ್ಷಸ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಓಲೈಕೆ ಹಾಗೂ ಓಟ್ ಬ್ಯಾಂಕ್ ರಾಜಕಾರಣದ ವಿರುದ್ದ ವಾಗ್ದಾಳಿ ನಡೆಸಿ ಹಿಂದುಗಳ ದಮನಕ್ಕೆ ಯತ್ನ ನಡೆದಿದೆ ಎಂದು ಆರೋಪಿಸಿದರು.

    ಈ ವೇಳೆ ರಾಜ್ಯ ಸರ್ಕಾರದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಕಾನೂನನ್ನು ಕೈಗೆ ತೆಗೆದುಕೊಂಡರೂ ಇನ್ನೂ ಓಲೈಕೆ ಮಾಡುತ್ತಿದೆ ಎಂದು ಕಿಡಿಕಾರಿದರು.

    ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಿಂದುಗಳ ರಕ್ಷಣೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತದೆ. ಅವರಿಗೆ ಶಿಕ್ಷೆ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಜವಾಬ್ದಾರಿ ಸ್ಥಾನದಲ್ಲಿದ್ದು, ತಮ್ಮದೇ ಪಕ್ಷದ ಕಾರ್ಪೋರೇಟರ್ ಮಗಳಿಗೆ ರಕ್ಷಣೆ ನೀಡಲಾಗಲಿಲ್ಲ, ಜತೆಗೆ ಕೊಲೆಯನ್ನು ವೈಯಕ್ತಿಕ ಎಂದು ಹೇಳಿಕೆ ನೀಡುವ ಮೂಲಕ ಹಿಂದೂ ವಿರೋಧಿ ನಡೆನಮ್ಮದು ಎಂದು ಸಾಬೀತು ಮಾಡಿದ್ದಾರೆ ಎಂದರು.

    ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿದವರನ್ನೂ ನಮ್ಮ ಬ್ರರ‍್ಸ್ ಎನ್ನುವ ಕಾಂಗ್ರೆಸ್ ಮುಖಂಡರು ನೇಹಾ ಕೊಲೆಯನ್ನು ಮುಚ್ಚಿಹಾಕುವ ಸಾಧ್ಯತೆ ಇರುವುದರಿಂದ ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕಾಗಿದೆ ಎಂದರು.

    ಹಿAದೂಗಳು ಹನುಮಾನ್ ಚಾಲೀಸಾ ಪಠಿಸಿದರೆ ಅವರನ್ನು ಬಂಧಿಸಲಾಗುತ್ತದೆ ಆದರೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ರಕ್ಷಣೆ ಮಾಡಲಾಗುತ್ತದೆ. ಇದು ಹಿಂದೂ ವಿರೋಧಿ ಸರ್ಕಾರವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

    ಬಜರಂಗದಳ ಬಾಲಾಜಿ, ಬಾಬು, ವಿಜಯಕುಮಾರ್, ವಿಹಿಂಪ ಮುಖಂಡ ಡಾ.ಶಿವಣ್ಣ, ರಾಮಣ್ಣ, ಮಂಜುನಾಥ್ ಮುದ್ದಪ್ಪ, ಯಶವಂತ್, ಗೋವಿಂದ, ಶ್ರೀಧರ್, ವಿನಯ್, ತುಳಸಿರಾಮ್, ಪ್ರವೀಣ್, ಓಂ ಪ್ರಕಾಶ್, ಮೋಟಿ, ಅಡಿಕೆ ನಾಗಪ್ಪ, ಸ್ನೇಕ್ ರವಿ, ಸುಪ್ರೀತ್, ವಿಶಾಖ್, ಕಿಟ್ಟ, ವಿಶ್ವನಾಥ್, ಚಿಕ್ಕ, ಸುಮನ್, ರಾಮಚಂದ್ರ, ಮುರಳಿ, ಜೀವನ್, ಕಿರಣ್, ಗೋವಿಂದ್, ಗೋಪಿ, ಗೋವರ್ಧನ್, ಪವನ್ ಮತ್ತಿತರರು ಭಾಗವಹಿಸಿದ್ದರು.

    ಚಿತ್ರ ೨೦ ಕೆ.ಎಲ್.ಆರ್. ೦೬ : ಕೋಲಾರದಲ್ಲಿ ನೇಹಾ ಹತ್ಯೆ ಮಾಡಿರುವ ರಾಕ್ಷಸ ಫಯಾಜ್‌ಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಂತರ ನೇಹಾ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

    ನೇಹಾ ಕೊಲೆಗೆ ಬಜರಂಗದಳ ಖಂಡನೆ/ರಾಕ್ಷಸನಿಗೆ ಗಲ್ಲುಶಿಕ್ಷೆ ನೀಡಿ/ಸರ್ಕಾರಕ್ಕೆ ಆಗ್ರಹ ಗ್ಯಾರೆಂಟಿ ಭಜನೆ ನಿಲ್ಲಿಸಿ/ ಹೆಣ್ಣುಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಿ/ಸಿಎಂಆರ್.ಶ್ರೀನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts