More

    ನೇತಾಜಿ ಜೀವನ ಯುವಕರಿಗೆ ಸ್ಫೂರ್ತಿಯಾಗಲಿ-ಬಿ.ರವಿ

    ದಾವಣಗೆರೆ: ನೇತಾಜಿ ಸುಭಾಷ್ ಚಂದ್ರ ಬೋಸ್ ಅಂದರೆ ಭಾರತದ ವಿದ್ಯಾರ್ಥಿ-ಯುವಜನರ ಸ್ಫೂರ್ತಿ. ವಿದ್ಯಾರ್ಥಿಗಳು ನೇತಾಜಿಯವರ ಜೀವನ ಸಂಘರ್ಷ ತಿಳಿದರೆ ಸಾಲದು. ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಬಿ.ರವಿ ಹೇಳಿದರು.
    ಇಲ್ಲಿನ ವಾಲ್ಮೀಕಿ ಭವನದಲ್ಲಿ ಶನಿವಾರ, ಎಐಡಿಎಸ್‌ಒ ದಾವಣಗೆರೆ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ನೇತಾಜಿ ಅವರ 125ನೇ ಜನ್ಮ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸ್ವಾತಂತ್ರೃ ಹೋರಾಟದ ರಾಜರಹಿತ ಪಂಥವನ್ನು ನೇತಾಜಿ ಮುನ್ನಡೆಸಿದರು. ಸಮಾಜವಾದಿ ಭಾರತ ನಿರ್ಮಾಣದ ಕನಸು ಕಂಡಿದ್ದರು. ಮಾನವ ಶೋಷಣೆರಹಿತ ಸಮಾಜದ ಬಗ್ಗೆ ಆಶಿಸಿದ್ದರು. ಈ ದಿಸೆಯಲ್ಲಿ ಯುವಜನರು ಕಾರ್ಯಪ್ರವೃತ್ತರಾಗಬೇಕು ಎಂದರು.
    ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್. ಅಶ್ವಿನಿ ಮಾತನಾಡಿ ನೇತಾಜಿಯವರ ವಿಚಾರ ಇಂದಿಗೂ ಪ್ರಸ್ತುತವಾಗಿವೆ. ಎಲ್ಲರಿಗೂ ವೈಜ್ಞಾನಿಕ – ಧರ್ಮನಿರಪೇಕ್ಷ -ಪ್ರಜಾತಾಂತ್ರಿಕ ಶಿಕ್ಷಣ ಸಿಗಬೇಕು ಎಂಬ ಅವರ ಕನಸನ್ನು ನನಸು ಮಾಡುವ ದೇಶದ ವಿದ್ಯಾರ್ಥಿಗಳ ಮೇಲಿದೆ ಎಂದರು.
    ನೇತಾಜಿ ಅವರ 125ನೇ ವರ್ಷಾಚರಣೆಯ ಭಾಗವಾಗಿ ಹಲವು ಚಟುವಟಿಕೆಗಳು, ವಿದ್ಯಾರ್ಥಿಗಳ ಶಿಬಿರಗಳು, ವಿಚಾರ ಸಂಕಿರಣ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗಿದೆ ಎಂದರು.
    ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ಬಿ.ಕಾವ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts