More

    ನೃಪತುಂಗ ಬೆಟ್ಟ ಅಭಿವೃದ್ಧಿ

    ಹುಬ್ಬಳ್ಳಿ: ರೋಪ್​ವೇ ನಿರ್ಮಾಣ ಸೇರಿ ಮತ್ತಿತರ ವಿಶೇಷ ಸೌಲಭ್ಯ ಕಲ್ಪಿಸುವ ಮೂಲಕ ನೃಪತುಂಗ ಬೆಟ್ಟವನ್ನು ಪ್ರೇಕ್ಷಣೀಯ ತಾಣವನ್ನಾಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

    ಅರಣ್ಯ ಇಲಾಖೆ ಹಾಗೂ ನೃಪತುಂಗ ಬೆಟ್ಟ ವಾಯುವಿಹಾರಿಗಳ ಸಂಘದ ವತಿಯಿಂದ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. 1994ರಲ್ಲಿ ನೃಪತುಂಗ ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದಾಗ ಹಲವರು ಕುಹಕವಾಡಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಬೆಟ್ಟದ ಅಭಿವೃದ್ಧಿ ಮಾಡಲಾಗಿದೆ. ಕಲ್ಲು ಮಣ್ಣಿನ ಜಾಗದಲ್ಲಿ ಮರಗಳನ್ನು ಬೆಳೆಸಲಾಗಿದೆ. ವಿಶೇಷ ಅನುದಾನದಡಿ ಮೂಲ ಸೌಕರ್ಯ ಹೆಚ್ಚಿಸಲಾಗಿದೆ ಎಂದರು. ಬೆಟ್ಟದಲ್ಲಿ ನೃಪತುಂಗೋತ್ಸವ ಆಯೋಜನೆ, ಪ್ರವಾಸಿಗರಿಗೆ ವಾಹನ ವ್ಯವಸ್ಥೆ, ಸುಸಜ್ಜಿತ ಮಲ್ಟಿಜಿಮ್ ಕ್ಯಾಂಟೀನ್ ಸೇರಿ ಮತ್ತಿತರ ಸೌಕರ್ಯ ಒದಗಿಸುವಂತೆ ವಾಯುವಿಹಾರಿಗಳ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

    ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ್, ವಾಯು ವಿಹಾರಿ ಸಂಘದ ಡಾ.ಗೋವಿಂದ ಮಣ್ಣೂರ, ಬಿ.ಎಫ್ ಬಿಜಾಪುರ, ಸಿದ್ದು ಮೊಗಲಿ ಶೆಟ್ಟರ್, ಎಸ್.ವಿ ಅಂಗಡಿ, ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.

    ರೋಪ್ ವೇಗೆ ಚಿಂತನೆ: ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆವರೆಗೆ ರೋಪ್ ವೇ ನಿರ್ವಿುಸಲು ಯೋಚಿಸಿ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು. ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಕಾರಣಗಳು ಎದುರಾಗಿದ್ದರಿಂದ ಯೋಜನೆ ರದ್ದುಗೊಳಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತರು ನೃಪತುಂಗ ಬೆಟ್ಟದಿಂದ ಸಾಯಿ ಮಂದಿರದವರೆಗೆ ರೋಪ್ ವೇ ನಿರ್ವಣದ ಸಾಧ್ಯತೆ ಬಗ್ಗೆ ತಜ್ಞರ ನೇತೃತ್ವದಲ್ಲಿ ಯೋಜನೆ ತಯಾರಿಸಿದರೆ, ಸಿ.ಎಸ್.ಆರ್ ನಿಧಿಯಡಿ ಹಣ ಒದಗಿಸಲಾಗುವುದು ಎಂದು ಶೆಟ್ಟರ್ ಹೇಳಿದರು.

    ರಾಜ್ಯದ ಭವಿಷ್ಯದ ನಗರವಾಗಲಿದೆ ಹು-ಧಾ
    ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಹಾಗಾಗಿ, ಮುಂದಿನ ವರ್ಷಗಳಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಕೈಗಾರಿಕೆ ವಲಯದಲ್ಲಿ ಭಾರಿ ಬದಲಾವಣೆಯಾಗಲಿದೆ. ಆ ಮೂಲಕ ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ ಎಂದು ಶೆಟ್ಟರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts