More

    ನೂತನ ತಾಲೂಕಾಗಿ ಹಾರೋಹಳ್ಳಿ

    ಜಯರಾಮನಾಯಕ್.ಎಲ್.ಜಿ,

    ಹಾರೋಹಳ್ಳಿ :ರಾಮನಗರ ಜಿಲ್ಲೆಗೆ ಮತ್ತೊಂದು ತಾಲೂಕನ್ನು ೋಷಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಇದರೊಂದಿಗೆ ಜಿಲ್ಲೆ 5 ತಾಲೂಕುಗಳನ್ನು ಹೊಂದಿದಂತಾಗಿದೆ.
    ಕನಕಪುರ ತಾಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಒಟ್ಟುಗೂಡಿಸಿ 26 ಕಂದಾಯ ಗ್ರಾಮಗಳನ್ನು ಬೇರ್ಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹಾರೋಹಳ್ಳಿಯನ್ನು ತಾಲೂಕನ್ನಾಗಿ 2009ರ ಫೆ.8ರಂದು ನಡೆದ ಬಜೆಟ್‌ನಲ್ಲಿ ೋಷಿಸಿದ್ದರು. ಕಾರಣಾಂತರಗಳಿಂದ ತಾಲೂಕು ೋಷಣೆಗೊಂಡು ಯಾವುದೇ ಕೆಲಸ ಕಾರ್ಯಗಳು ನಡೆಯದೆ ನನೆಗುದಿಗೆ ಬಿದ್ದಿತ್ತು. ಈಗಿನ ಬಿಜೆಪಿ ಸರ್ಕಾರ ಹಾರೋಹಳ್ಳಿ ಜನರ ಕನಸು ನನಸು ಮಾಡಲು ಹೊರಟಿದೆ.

    ತಾಲೂಕಿಗೆ ಒಟ್ಟು 26 ಕಂದಾಯ ಗ್ರಾಮಗಳನ್ನು ೋಷಿಸಲಾಗಿದ್ದು, ಹಾರೋಹಳ್ಳಿ, ಗಬ್ಬಾಡಿ, ಕಗ್ಗಲಹಳ್ಳಿ, ಕಾಡುಜಕ್ಕಸಂದ್ರ, ಕೋನಸಂದ್ರ, ಬನ್ನಿಕುಪ್ಪೆ , ಮೇಡಮಾರನಹಳ್ಳಿ, ಕೊಳ್ಳಿಗನಹಳ್ಳಿ, ಪಿಚ್ಚನಕೆರೆ, ಚಿಕ್ಕಕಲ್ಬಾಳು, ದೊಡ್ಡಮುದುವಾಡಿ, ಮರಳವಾಡಿ ಹೋಬಳಿ ದೊಡ್ಡಮರಳವಾಡಿ, ಚಿಕ್ಕಮರಳವಾಡಿ, ತೇರುಬೀದಿ, ಯಲಚವಾಡಿ, ಕ್ಲನಕುಪ್ಪೆ, ಬನವಾಸಿ, ತಟ್ಟೆಕೆರೆ, ಮಲ್ಲಿಗೆಮೆಟ್ಟಿಲು, ತೋಕಸಂದ್ರ, ಎಂ.ಮಣಿಯಂಬಾಳ್, ಟಿ.ಹೊಸಹಳ್ಳಿ, ಚೀಲೂರು, ದೊಡ್ಡಸಾದೇನಹಳ್ಳಿ, ಅವರೆಮಾಳರಾಂಪುರ, ಗೋದೂರು, ಸೇರಿದಂತೆ ಒಟ್ಟು ಕಂದಾಯ ವೃತ್ತಗಳು ಹಾರೋಹಳ್ಳಿ ತಾಲೂಕಿನ ಸುಪರ್ದಿಗೆ ಬರಲಿದ್ದು, ಹಾರೋಹಳ್ಳಿ ಹೋಬಳಿಯ 11 ವೃತ್ತಗಳ 107 ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ 15 ವೃತ್ತಗಳ 145 ಗ್ರಾಮಗಳು ಸೇರಿ ಒಟ್ಟು ಹಾರೋಹಳ್ಳಿ ತಾಲೂಕಿಗೆ 252 ಗ್ರಾಮಗಳು ಸೇರ್ಪಡೆಗೊಳ್ಳಲಿವೆ.

    ಇನ್ನು ಪೂರ್ವಕ್ಕೆ ತಮಿಳುನಾಡು, ಆನೇಕಲ್ ತಾಲೂಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಗಡಿ ಪಶ್ಚಿಮದಲ್ಲಿ ರಾಮನಗರ ಮತ್ತು ಕನಕಪುರ ತಾಲೂಕುಗಳ ಗಡಿ ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು ಆನೇಕಲ್ ಮತ್ತು ರಾಮನಗರ ತಾಲೂಕುಗಳು ಗಡಿ ದಕ್ಷಿಣಕ್ಕೆ ಕನಕಪುರ ತಾಲೂಕು ಗಡಿಯನ್ನು ನೂತನ ತಾಲೂಕು ಹಾರೋಹಳ್ಳಿ ಹಂಚಿಕೊಳ್ಳಲಿದೆ.

    ಮೂಲಸೌಕರ್ಯ ಅಗತ್ಯ:  ಹಾರೋಹಳ್ಳಿ ತಾಲೂಕು ೋಷಣೆ ಮಾಡಿದರಷ್ಟೇ ಸಾಲದು, ಪರಿಪೂರ್ಣ ತಾಲೂಕಿಗೆ ಬೇಕಾದ ಮೂಲಸೌಕರ್ಯ ಒದಗಿಸುವುದು ಅತಿಮುಖ್ಯ. ತಾಲೂಕು ಕಚೇರಿ, ತಹಸೀಲ್ದಾರ್, ನ್ಯಾಯಾಲಯ ಸಂಕೀರ್ಣ, ಸ್ಥಳೀಯ ಸಂಸ್ಥೆಗಳ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಇಲಾಖೆಗಳ ಅಧಿಕಾರಿಗಳ ನೇಮಕ ಹೀಗೆ ಸಾಕಷ್ಟು ಕೆಲಸಗಳು ಆದಷ್ಟು ಬೇಗ ನಡೆಯಬೇಕಿದೆ.

    ಗೆದ್ದರಾ ದಳಪತಿಗಳು : ಹಾರೋಹಳ್ಳಿಯನ್ನು ತಾಲೂಕಾಗಿ ೋಷಣೆ ಮಾಡುವಲ್ಲಿ ಕುಮಾರಸ್ವಾಮಿ ಅವರ ಪಾತ್ರ ದೊಡ್ಡದು. ಬಿಜೆಪಿ ಸರ್ಕಾರವೂ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದು, ಆದಷ್ಟು ಬೇಗ ತಾಲೂಕಿಗೆ ಬೇಕಾದ ಎ್ಲ ಕೆಲಸಗಳು ಮಾಡಲು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಜನರ ಆಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts